ಲಂಡನ್:ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಅವರು ಸಂದರ್ಶನವೊಂದರಲ್ಲಿ ರಾಜಮನೆತನದಿಂದ ತಮಗೆ ವರ್ಣಬೇಧ ನಿಂದನೆ ಮಾಡಲಾಗಿತ್ತು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಜಕುಮಾರ ವಿಲಿಯಮ್ ರಾಜಮನೆತನವನ್ನು ಸಮರ್ಥಿಸಿಕೊಂಡಿದ್ದಾರೆ.
ಬ್ರಿಟನ್‌ನ ರಾಜಮನೆತನವು ಎಂದಿಗೂ ವರ್ಣಭೇದ ನೀತಿಯನ್ನು ಅನುಸರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗಡಿ ಜಟಾಪಟಿ ನಡುವೆಯೇ ಬ್ರಹ್ಮಪುತ್ರ ನದಿಗೆ ಅಣೆಕಟ್ಟೆ ಕಟ್ಟಲು ಚೀನಾ ಸಿದ್ಧತೆ!
ಪೂರ್ವ ಲಂಡನ್‌ನಲ್ಲಿರುವ ಶಾಲೆಯೊಂದಕ್ಕೆ ಭೇಟಿ ನೀಡಿದ ವೇಳೆ, ರಾಜಕುಮಾರ ಹ್ಯಾರಿ, ಮೇಘನ್ ಅವರು ಓಪ್ರಾ ವಿನ್‌ಫ್ರೆ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾಡಿರುವ ಆರೋಪಗಳ ಕುರಿತು ಮೊದಲ ಬಾರಿಗೆ ಅವರು ಪ್ರತಿಕ್ರಿಯಿಸಿದ್ದಾರೆ.
ರಾಜಕುಮಾರ ಪ್ರಿನ್ಸ್ ಅವರನ್ನು ಮದುವೆಯಾದ ನಂತರ ರಾಜಮನೆತನದಿಂದ ಸಾಕಷ್ಟು ನಿಂದನೆಗೆ ಒಳಗಾದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆಯೂ ಹಲವು ಸಲ ಬಂದಿತ್ತು ಎಂದು ಹೇಳಿದ್ದ ಮೇಘನ್, ಹಲವಾರು ವಿಷಯಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದರು.