ರೊಮೇನಿಯಾ:ಸಂಘರ್ಷಪೀಡಿತ ಉಕ್ರೇನ್‌ನಿಂದ ಸಾವಿರಾರು ವಿದ್ಯಾರ್ಥಿಗಳು ಗಡಿರಾಷ್ಟ್ರಗಳಾದ ಪೋಲೆಂಡ್, ರೊಮೇನಿಯಾ ಹಾಗು ಮೊಲ್ಡೋವಾ ಸೇರಿದಂತೆ ಅನೇಕ ದೇಶಗಳಿಗೆ ತೆರಳಿದ್ದು ಅಲ್ಲಿಂದ ತಾಯ್ನಾಡಿಗೆ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈಗಾಗಲೇ ಉಕ್ರೇನ್ ನೆರೆ ದೇಶಗಳಿಗೆ ವಿವಿಧ ದೇಶಗಳಿಗೆ ಕೇಂದ್ರ ಸಚಿವರು ತೆರಳಿದ್ದು ಕಾರ್ಯಪ್ರವೃತ್ತರಾಗಿದ್ದಾರೆ.
ರೊಮೇನಿಯಾಗೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತೆರಳಿದ್ದು, ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡ್ತಿದ್ದಾರೆ. ಈ ವೇಳೆ ಅಲ್ಲಿನ ಮೇಯರ್ ಜೊತೆ ವಾಗ್ವಾದ ನಡೆದಿರುವ ಘಟನೆ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ:'ಧ್ವಂಸಗೊಂಡ ಉಕ್ರೇನ್ ಮರಳಿ ಕಟ್ಟುತ್ತೇವೆ, ಇದಕ್ಕೆ ರಷ್ಯಾ ಬೆಲೆ ತೆರಲಿದೆ'
ಯಾವ ಕಾರಣಕ್ಕಾಗಿ ವಾಗ್ವಾದ?:ರೊಮೇನಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳು ಉಳಿದುಕೊಂಡಿದ್ದ ಶಿಬಿರ ತಲುಪುತ್ತಿದ್ದಂತೆ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸರ್ಕಾರ ಮಾಡಿರುವ ವ್ಯವಸ್ಥೆ ಬಗ್ಗೆ ಅವರಿಗೆ ತಿಳಿಸುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ರೊಮೇನಿಯಾ ಮೇಯರ್, 'ವಿದ್ಯಾರ್ಥಿಗಳು ಉಳಿದುಕೊಳ್ಳಲು ಹಾಗೂ ಆಹಾರದ ವ್ಯವಸ್ಥೆ ಮಾಡಿರುವುದು ನಾನು, ನೀವಲ್ಲ. ಇವರು ಯಾವಾಗ ಮನೆಗೆ ತೆರಳಬಹುದು ಎಂಬುದನ್ನು ವಿವರಿಸಿ' ಎಂದು ಗರಂ ಆದರು. ಇದಾದ ಬಳಿಕ ಸಿಟ್ಟಿನಿಂದಲೇ ರೊಮೇನಿಯಾ ಮೇಯರ್ಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.
ಉಕ್ರೇನ್ನಲ್ಲಿ ದಿನದಿಂದ ದಿನಕ್ಕೆ ಯುದ್ಧ ಭೀತಿ ಹೆಚ್ಚಾಗುತ್ತಿದೆ. ಭಾರತೀಯ ತೆರವಿಗೊಸ್ಕರ ಕೇಂದ್ರ ಸರ್ಕಾರ 'ಆಪರೇಷನ್ ಗಂಗಾ' ಹಮ್ಮಿಕೊಂಡಿದೆ. ಈಗಾಗಲೇ ಉಕ್ರೇನ್‌ನಿಂದ 7 ಸಾವಿರಕ್ಕೂ ಅಧಿಕ ಭಾರತೀಯರನ್ನು ಯಶಸ್ವಿಯಾಗಿ ಕರೆತರುವಲ್ಲಿ ಕೇಂದ್ರ ಯಶಸ್ವಿಯಾಗಿದೆ.