ಸಿಡ್ನಿ (ಆಸ್ಟ್ರೇಲಿಯಾ): ಕೊರೊನಾ ಅವಾಂತರದಿಂದ ನಲುಗಿರುವ ಆಸ್ಟ್ರೇಲಿಯಾ ಹೊಸ ವರ್ಷ ಆಚರಣೆಯ ಮೇಲೆ ನಿರ್ಬಂಧ ಹೇರಿದೆ. ಇಲ್ಲಿನ ನ್ಯೂ ಸೌತ್ ವೇಲ್ಸ್, ಗ್ಲಾಡಿಸ್ ಬೆರೆಜಿಕ್ಲಿಯನ್ ಪ್ರದೇಶದ ಜನತೆಗೆ ಮನೆಯಲ್ಲಿಯೇ ಇರುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಸಿಡ್ನಿಯಲ್ಲಿ ಹೊಸ 10 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದೀಗ ನಿಯಾಮಾವಳಿಗಳನ್ನು ಕಠಿಣಗೊಳಿಸಲಾಗಿದೆ.
ಇದಲ್ಲದೆ ಪ್ರತಿವರ್ಷ ಸಿಡ್ನಿಯ ಹಾರ್ಬರ್ ಸಮುದ್ರ ತೀರದಲ್ಲಿ ಆಯೋಜಿಸಲಾಗುತ್ತಿದ್ದ ಸಿಡಿಮದ್ದು ಉತ್ಸವದ ವೀಕ್ಷಣೆಗೆ ಲಕ್ಷಾಂತರ ಮಂದಿ ಭಾಗಿಯಾಗುತ್ತಿದ್ದರು. ಆದರೆ ಈ ಬಾರಿ ಯಾರಿಗೂ ಈ ಬಂದರು ಪ್ರದೇಶಕ್ಕೆ ತೆರಳಲು ಅವಕಾಶ ನೀಡಿಲ್ಲ.