ಮಾಸ್ಕೋ(ರಷ್ಯಾ): ಉಕ್ರೇನ್ ವಿವಾದಕ್ಕೆ ಸಂಬಂಧಿಸಿದಂತೆ ರಷ್ಯಾ ರಾಜತಾಂತ್ರಿಕ ಮಾತುಕತೆಗಳ ಮೂಲಕ ಪರಿಹಾರವನ್ನು ಹುಡುಕಲು ಸಿದ್ಧವಾಗಿದೆ. ಆದರೆ ರಷ್ಯಾದ ಹಿತಾಸಕ್ತಿಗಳು, ರಷ್ಯಾದ ನಾಗರಿಕರ ಭದ್ರತೆಯ ದೃಷ್ಟಿಯ ಕಾರಣದಿಂದಾಗಿ ಮಾತುಕತೆ ಸಾಧ್ಯವಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಹೇಳಿದ್ದಾರೆಂದು ಎಎಫ್ಬಿ ವರದಿ ಮಾಡಿದೆ.
ರಷ್ಯಾ-ಉಕ್ರೇನ್ ಜಟಾಪಟಿ: 'ರಾಜತಾಂತ್ರಿಕ ಮಾತುಕತೆಗಳಿಗೆ ಸಿದ್ಧ, ಆದರೆ..' : ವ್ಲಾದಿಮೀರ್ ಪುಟಿನ್ - ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟಿನ್
ರಾಜತಾಂತ್ರಿಕ ಮಾತುಕತೆಗಳ ಮೂಲಕ ಸೂಕ್ತ ಪರಿಹಾರ ಹುಡುಕಲು ರಷ್ಯಾ ಸಿದ್ಧವಾಗಿದೆ. ಆದರೆ ರಷ್ಯಾದ ನಾಗರಿಕರ ಭದ್ರತೆಯ ಕಾರಣದಿಂದಾಗಿ ಮಾತುಕತೆ ಸಾಧ್ಯವಿಲ್ಲ ಎಂದು ಪುಟಿನ್ ಹೇಳಿದ್ದಾರೆ.
ರಾಜತಾಂತ್ರಿಕ ಮಾತುಕತೆಗಳಿಗೆ ರಷ್ಯಾ ಸಿದ್ಧ, ಆದರೆ.. : ವ್ಲಾದಿಮೀರ್ ಪುಟಿನ್
ಈ ಹೇಳಿಕೆ ಮೂಲಕ ಉಕ್ರೇನ್ನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ರಷ್ಯಾದ ಬೆಂಬಲಿತ ಕೆಲವು ಪ್ರದೇಶಗಳ ಮೇಲೆ ಉಕ್ರೇನ್ ಬಾಂಬ್ ದಾಳಿ ನಡೆಸಿದೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ
ಉಕ್ರೇನ್ ಗಡಿಯ ಬಳಿಯ ದಕ್ಷಿಣ ಬೆಲಾರಸ್‌ನಲ್ಲಿ 100ಕ್ಕೂ ಹೆಚ್ಚು ಮಿಲಿಟರಿ ವಾಹನಗಳು ಮತ್ತು ಸೈನಿಕರ ಟೆಂಟ್‌ಗಳ ಹೊಸ ರಷ್ಯಾ ನಿಯೋಜನೆ ಮಾಡಿರುವುದು ಉಪಗ್ರಹ ಚಿತ್ರಗಳ ಮೂಲಕ ಗೊತ್ತಾಗುತ್ತಿದೆ ಎಂದು ಸ್ಪೇಸ್ ಟೆಕ್ನಾಲಜಿ ಕಂಪನಿ ಮ್ಯಾಕ್ಸರ್ ಟೆಕ್ನಾಲಜೀಸ್ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.