ಕರ್ನಾಟಕ

karnataka

ETV Bharat / international

ಭೀಕರ ಪ್ರವಾಹ: ಕಣ್ಣ ಮುಂದೆಯೇ ಕೊಚ್ಚಿ ಹೋದ ಮನೆಗಳು, ಅಸಹಾಯಕರಾದ ಜನ - ಕ್ರೂಜ್‌ಬರ್ಗ್

ಭಾರೀ ಮಳೆ ಹಿನ್ನೆಲೆ ಜರ್ಮನಿಯಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಜನ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಪ್ರವಾಹದಿಂದ 100 ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ.

Raging floodwaters carry along house in Germany
ಜರ್ಮನ್ ಪ್ರವಾಹ

By

Published : Jul 17, 2021, 12:16 PM IST

ಬರ್ಲಿನ್ : ಭೀಕರ ಪ್ರವಾಹದಿಂದ ದೇಶದಲ್ಲಿ ಉಂಟಾದ ಆರ್ಥಿಕ ನಷ್ಟ ಅಪಾರ ಎಂದು ಜರ್ಮನಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹಕ್ಕೆ ಜರ್ಮನಿಯಲ್ಲಿ ನೂರಾರು ಕಟ್ಟಡಗಳು ನೆಳಕ್ಕುರುಳಿವೆ. ಸುಮಾರು 106 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರೈನ್‌ಲ್ಯಾಂಡ್ - ಪ್ಯಾಲಟಿನೇಟ್ ರಾಜ್ಯದ ಕ್ರೂಜ್‌ಬರ್ಗ್ ಬಳಿ ಉಂಟಾದ ಪ್ರವಾಹದ ದೃಶ್ಯಗಳು ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿತ್ತು.

ಪ್ರವಾಹದ ಭೀಕರ ದೃಶ್ಯ

ಓದಿ : ಜರ್ಮನಿಯಲ್ಲಿ ಮಹಾ ಪ್ರವಾಹಕ್ಕೆ 103ಕ್ಕೂ ಹೆಚ್ಚು ಬಲಿ; ಯುರೋಪಿನ ಹಲವೆಡೆ ಸಾವಿನ ಸಂಖ್ಯೆ 118ಕ್ಕೇರಿಕೆ

ಪ್ರವಾಹದಿಂದ ತಪ್ಪಿಸಿಕೊಳ್ಳಲು ಜನ ಎತ್ತರದ ಜಾಗಗಳನ್ನು ಏರಿ ಕುಳಿತಿದ್ದರು. ಕ್ರೂಜ್‌ಬರ್ಗ್ ಬಳಿ ಜನ ಸೇತುವೆ ಮೇಲೆ ಹತ್ತಿ ಕುಳಿತಿದ್ದಿದ್ದರೆ, ಅವರ ಮನೆಗಳು ಕಣ್ಣ ಮುಂದೆಯೇ ಕೊಚ್ಚಿ ಹೋಗುತ್ತಿತ್ತು. ಕೇವಲ ಮನೆ ಮಾತ್ರವಲ್ಲದೇ, ದೊಡ್ಡ ದೊಡ್ಡ ಮರಗಳು ಕೂಡ ನೆಲಕ್ಕುರುಳಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದೃಶ್ಯ ಭಯನಕವಾಗಿತ್ತು. ಕಣ್ಣ ಮುಂದೆಯೇ ತಮ್ಮ ಸೂರು ಕೊಚ್ಚಿ ಹೋಗುತ್ತಿದ್ದರೂ, ಜನ ಅಸಹಾಯಕರಾಗಿದ್ದರು.

ABOUT THE AUTHOR

...view details