ಕರ್ನಾಟಕ

karnataka

ETV Bharat / international

ಬ್ರಿಟನ್​ ರಾಣಿಗೂ ಕೊರೊನಾ ಭೀತಿ, ಅರಮನೆಯಿಂದ ಬೇರೆಡೆಗೆ ಶಿಫ್ಟ್ - ಬಕಿಂಗ್​ಹ್ಯಾಮ್ ಅರಮನೆ ಸುದ್ದಿ

ಬ್ರಿಟನ್​ ರಾಣಿ ಎಲಿಜಬೆತ್ ಅವ​ರನ್ನು ಬಕಿಂಗ್​ಹ್ಯಾಮ್ ಅರಮನೆಯಿಂದ ವಿಂಡ್ಸರ್ ಕ್ಯಾಸ್ಟಲ್​ಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಇಲ್ಲದಿದ್ದರೂ, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

UK Queen Elizabeth II
ಯುಕೆ ರಾಣಿ ಎಲಿಜಬೆತ್ II

By

Published : Mar 15, 2020, 4:37 PM IST

ಲಂಡನ್​:ಯುನೈಟೆಡ್ ಕಿಂಗ್‌ಡಮ್ (ಯುಕೆ) ರಾಣಿ ಎಲಿಜಬೆತ್ II, ಬಕಿಂಗ್​ಹ್ಯಾಮ್ ಅರಮನೆಯನ್ನು ತೊರೆದು, ವಿಂಡ್ಸರ್ ಕ್ಯಾಸ್ಟಲ್​ಗೆ ಶಿಫ್ಟ್​ ಆಗಿದ್ದಾರೆ. ಕೊರೊನಾ ಭೀತಿಯಿಂದಾಗಿ ರಾಜಕುಮಾರ ಫಿಲಿಪ್​ನನ್ನು ಸಂಪರ್ಕಿಸಲು ಸುಲಭವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಬಗ್ಗೆ ಕುಟುಂಬದ ಮೂಲಗಳಿಂದ ಮಾಹಿತಿ ದೊರಕಿದೆ. ಸದ್ಯ ರಾಣಿ ಆರೋಗ್ಯವಾಗಿದ್ದು, ಅವರನ್ನು ಸ್ಥಳಾಂತರಿಸುವುದು ಉತ್ತಮ ಎಂದು ಭಾವಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಅವರ ಕೆಲ ಸಿಬ್ಬಂದಿ ಕೊರೊನಾ ವೈರಸ್ ಬಗ್ಗೆ ಸ್ವಲ್ಪ ಭಯಭೀತರಾಗಿದ್ದಾರೆ ಎನ್ನಲಾಗಿದೆ.

ಬ್ರಿಟನ್​ ರಾಣಿ

ಅರಮನೆಗೆ ವಿಶ್ವದ ಮೂಲೆ ಮೂಲೆಗಳಿಂದಲೂ ರಾಜಕಾರಣಿಗಳು, ಗಣ್ಯರು ಸೇರಿದಂತೆ ಸಂದರ್ಶಕರು ಭೇಟಿ ನೀಡುತ್ತಿರುತ್ತಾರೆ. ರಾಣಿ ಇತ್ತೀಚಿನವರೆಗೂ ಅಲ್ಲಿ ಬಹಳಷ್ಟು ಜನರನ್ನು ಭೇಟಿ ಮಾಡಿದ್ದಾರೆ. ಆದರೆ ಅವರ 94 ನೇ ಹುಟ್ಟುಹಬ್ಬಕ್ಕೆ ಕೆಲವೇ ವಾರಗಳಿರುವುದರಿಂದ ಅರಮನೆಯಿಂದ ಸ್ಥಳಾಂತರಿಸುವುದು ಉತ್ತಮ ಎಂದು ಮೂಲಗಳು ತಿಳಿಸಿದೆ. ಅಲ್ಲದೆ ಬಕಿಂಗ್​ಹ್ಯಾಮ್ ಅರಮನೆಯು ಲಂಡನ್‌ನ ಮಧ್ಯದಲ್ಲಿರುವುದರಿಂದ ಹೆಚ್ಚು ಅಪಾಯಕಾರಿ ಸ್ಥಳವೆಂದು ಹೇಳಲಾಗಿದೆ.

ಸದ್ಯ ಇಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಇಲ್ಲದಿದ್ದರೂ, ಯಾವುದೇ ಕಾದು ನೋಡುವ ಪ್ರಯತ್ನಕ್ಕೆ ಕೈ ಹಾಕಲು ಇಚ್ಛಿಸುವುದಿಲ್ಲ ಎಂದು ಮೂಲಗಳು ತಿಳಿಸಿದೆ.

ABOUT THE AUTHOR

...view details