ಲಂಡನ್: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರಿಗಾಗಿ ಸುಮಾರು £33 ಮಿಲಿಯನ್ (ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 247ಕೋಟಿ ರೂ) ಹಣವನ್ನು ಸಂಗ್ರಹಿಸಿದ 100 ವರ್ಷದ ಕ್ಯಾಪ್ಟನ್ ಟಾಮ್ ಮೂರ್ ಅವರನ್ನು ರಾಣಿ ಎಲಿಜಬೆತ್ II ಅಭಿನಂದಿಸಿದ್ದಾರೆ.
ಕೊರೊನಾ ಹೋರಾಟಕ್ಕೆ ಶತಾಯುಷಿಯ ಧನ ಸಹಾಯ: ಗೌರವ ಸಲ್ಲಿಸಿದ ರಾಣಿ ಎಲಿಜಬೆತ್ II - ಕ್ಯಾಪ್ಟನ್ ಟಾಮ್ ಮೂರ್
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರಿಗಾಗಿ ಸುಮಾರು £33 ಮಿಲಿಯನ್ (247 ಕೋಟಿ ರೂ. ) ನೀಡಿದ 100 ವರ್ಷದ ಕ್ಯಾಪ್ಟನ್ ಟಾಮ್ ಮೂರ್ ಅವರನ್ನು ರಾಣಿ ಎಲಿಜಬೆತ್ II ಅಭಿನಂದಿಸಿದ್ದಾರೆ.
knighthood
"ಕ್ಯಾಪ್ಟನ್ ಸರ್ ಥಾಮಸ್ ಮೂರ್ ಅವರಿಗೆ ಇಂದು ರಾಣಿ ಗೌರವ ಪ್ರದಾನ ಮಾಡಿದರು" ಎಂದು ಬಕಿಂಗ್ಹ್ಯಾಮ್ ಅರಮನೆಯ ಟ್ವೀಟ್ ತಿಳಿಸಿದೆ.
ಏಪ್ರಿಲ್‌ನಲ್ಲಿ ತನ್ನ 100 ನೇ ಹುಟ್ಟುಹಬ್ಬವನ್ನು ಆಚರಿಸಿದ ಎರಡನೇ ಮಹಾಯುದ್ಧದ ಅನುಭವಿ ಕ್ಯಾಪ್ಟನ್ ಟಾಮ್ ಮೂರ್, ಯುಕೆ ರಾಷ್ಟ್ರೀಯ ಆರೋಗ್ಯ ಸೇವೆಗಾಗಿ (ಎನ್‌ಎಚ್‌ಎಸ್) ಸುಮಾರು £33 ಮಿಲಿಯನ್ ಹಣ ನೀಡಿದ್ದಾರೆ.