ಲಂಡನ್: ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಹಾಗೂ ಹ್ಯಾರಿ ದಂಪತಿ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಬ್ರಿಟನ್ ರಾಜಮನೆತನವು ತನ್ನ 11ನೇ ಮರಿಮೊಮ್ಮಗುವನ್ನು ಬರಮಾಡಿಕೊಂಡಿದೆ.
ಬ್ರಿಟನ್ ರಾಜಮನೆತನಕ್ಕೆ ಹೆಣ್ಣು ಮಗುವಿನ ಆಗಮನ: 'ಲಿಲಿಬೆಟ್'ಗೆ ಜನ್ಮ ನೀಡಿದ ಮೇಘನ್ - ಹ್ಯಾರಿ - ಮೇಘನ್ ಮಾರ್ಕೆಲ್
ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಜ್ಜಿ ಮತ್ತು ಮುತ್ತಜ್ಜಿಯ ಹೆಸರು ಸೇರಿಸಿ ಲಿಲಿಬೆಟ್ ಡಯಾನಾ ಎಂದು ಕಂದಮ್ಮನಿಗೆ ಹೆಸರಿಡಲಾಗಿದೆ.
ಮಗುವಿಗೆ ಲಿಲ್ಲಿಬೆಟ್ ಡಯಾನಾ ಎಂದು ಹೆಸರಿಡಲಾಗಿದ್ದು, ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರು ಮಗುವಿಗೆ ಹಾರೈಸಿ ದಂಪತಿಗೆ ಶುಭ ಕೋರಿದ್ದಾರೆ. ರಾಣಿ ಎರಡನೇ ಎಲಿಜಬೆತ್ ಅವರಿಗೆ ಪ್ರೀತಿಯಿಂದ 'ಲಿಲಿಬೆಟ್' ಎಂದು ಕರೆಯುತ್ತಾರೆ. ರಾಜಮನೆತನದ ಮತ್ತೊಬ್ಬ ಯುವರಾಣಿಯೂ ಆಗಿದ್ದ ಮಗುವಿನ ಅಜ್ಜಿಯ ಹೆಸರು ಡಯಾನಾ ಆಗಿದ್ದು, ಅವರು 1997ರಲ್ಲಿ ಮೃತಪಟ್ಟಿದ್ದರು. ಹೀಗಾಗಿ ಅಜ್ಜಿ ಮತ್ತು ಮುತ್ತಜ್ಜಿಯ ಹೆಸರು ಸೇರಿಸಿ ಲಿಲಿಬೆಟ್ ಡಯಾನಾ ಎಂದು ಮಗುವಿಗೆ ಹೆಸರಿಡಲಾಗಿದೆ.
ಮೇಘನ್ - ಹ್ಯಾರಿ ದಂಪತಿಗೆ ಈಗಾಗಲೇ ಗಂಡು ಮಗುವಿದ್ದು, ಇದು ಎರಡನೇ ಮಗುವಾಗಿದೆ. ಮಾರ್ಚ್ನಲ್ಲೇ ಇವರು ತಮ್ಮ 2ನೇ ಮಗುವಿನ ಲಿಂಗವನ್ನು ಬಹಿರಂಗಪಡಿಸಿದ್ದರು. ಲಿಲಿಬೆಟ್ 3.48 ಕೆಜಿ ತೂಕವಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.