ಮಾಸ್ಕೋ(ರಷ್ಯಾ):ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಇದೀಗ ಅದರೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಇದರ ಮಧ್ಯೆ ಅಧಿಕಾರವನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ ಎಂದು ಉಕ್ರೇನ್ ಸೈನಿಕರಿಗೆ ಕಿವಿಮಾತು ಹೇಳಿದ್ದಾರೆ.
ವಾಡ್ಲಿಮಿರ್ ಪುಟಿನ್ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಭಯೋತ್ಪಾದಕರು ಮತ್ತು ಮಾದಕ ವ್ಯಸನಿಗಳ ಕೈಯಲ್ಲಿರುವ ಉಕ್ರೇನ್ ಅಧಿಕಾರವನ್ನ ನಿಮ್ಮ ಕೈಗೆ ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ. ಉಕ್ರೇನ್ ಮಿಲಿಟರಿ ಉದ್ದೇಶಿಸಿ ಮಾತನಾಡಿರುವ ರಷ್ಯಾ ಅಧ್ಯಕ್ಷ, ಯಹೂದಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಶದಲ್ಲಿರುವ ಕೈವ್ ನಾಯಕತ್ವವನ್ನ ನಿಮ್ಮ ವಶಕ್ಕೆ ಪಡೆದುಕೊಳ್ಳಿ ಎನ್ನುವ ಮೂಲಕ ಒಡೆದಾಳುವ ಅಸ್ತ್ರ ಪ್ರಯೋಗಿಸಿದ್ದಾರೆ.