ETV Bharat Karnataka

ಕರ್ನಾಟಕ

karnataka

ETV Bharat / international

ಟ್ರಂಪ್​​​ ವಾಗ್ದಂಡನೆಗೆ 'ನಿರ್ಮಿತ' ಆಧಾರ: ರಷ್ಯಾ ಅಧ್ಯಕ್ಷ ಪುಟಿನ್​​ - Putin statement Trump impeachment

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಡೊನಾಲ್ಡ್ ಟ್ರಂಪ್ ಅವರ ದೋಷಾರೋಪಣೆಯು 'ನಿರ್ಮಿತ' ಆಧಾರದ ಮೇಲೆ ಆಧಾರಿತವಾಗಿದೆ. ಇದು ಯುಎಸ್ ಅಧ್ಯಕ್ಷರ ಅಂತ್ಯವನ್ನು ಸೂಚಿಸುತ್ತದೆ ಎಂದು ನಾನು ನಂಬುವುದಿಲ್ಲ ಎಂದು ಹೇಳುವ ಮೂಲಕ ಟ್ರಂಪ್ ಅವರನ್ನು ಪುಟಿನ್ ಸಮರ್ಥಿಸಿಕೊಂಡಿದ್ದಾರೆ.

Putin statement Trump impeachment, ಟ್ರಂಪ್ ಸಮರ್ಥಿಸಿಕೊಂಡ ಪುಟಿನ್
ರಷ್ಯಾ ಅಧ್ಯಕ್ಷ ಪುಟಿನ್
author img

By

Published : Dec 20, 2019, 10:31 AM IST

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಡೊನಾಲ್ಡ್ ಟ್ರಂಪ್ ಅವರ ದೋಷಾರೋಪಣೆಯು 'ನಿರ್ಮಿತ' ಆಧಾರದ ಮೇಲೆ ಆಧಾರಿತವಾಗಿದೆ. ಇದು ಯುಎಸ್ ಅಧ್ಯಕ್ಷರ ಅಂತ್ಯವನ್ನು ಸೂಚಿಸುತ್ತದೆ ಎಂದು ನಾನು ನಂಬುವುದಿಲ್ಲ ಎಂದು ಹೇಳುವ ಮೂಲಕ ಟ್ರಂಪ್ ಅವರನ್ನು ಪುಟಿನ್ ಸಮರ್ಥಿಸಿಕೊಂಡಿದ್ದಾರೆ.

ದೋಷಾರೋಪಣೆಯು ಇನ್ನೂ ಸೆನೆಟ್ ಮೂಲಕ ಹೋಗಬೇಕಾಗಿದೆ. ಅಲ್ಲಿ ರಿಪಬ್ಲಿಕನ್​ರು ಬಹುಮತ ಹೊಂದಿದ್ದಾರೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಡೆಮಾಕ್ರಟ್​​ ಪಕ್ಷದವರು ತಮ್ಮ ಪಕ್ಷ ಸೂಚಿದಂತೆ ಅಧಿಕಾರ ದುರುಪಯೋಗ ಆರೋಪದ ಮೇಲೆ ಟ್ರಂಪ್​ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಮತ ಚಲಾಯಿಸಿದ್ದಾರೆ ಎಂದು ದೂರಿದ್ದಾರೆ.

ಪುಟಿನ್ ಯುಎಸ್ ಶಾಸಕಾಂಗದಲ್ಲಿನ ಘಟನೆಗಳನ್ನು ಡೆಮಾಕ್ರಾಟ್ ಮತ್ತು ರಿಪಬ್ಲಿಕನ್ ನಡುವಿನ ‘ಆಂತರಿಕ ರಾಜಕೀಯ ಹೋರಾಟದ ಮುಂದುವರಿಕೆ’ ಎಂದು ಬಣ್ಣಿಸಿದ್ದಾರೆ.

ABOUT THE AUTHOR

author-img

...view details