ಕರ್ನಾಟಕ

karnataka

ETV Bharat / international

'ನನ್ನೊಂದಿಗೆ ನೇರವಾಗಿ ಮಾತುಕತೆ ನಡೆಸಿ' ರಷ್ಯಾ ಅಧ್ಯಕ್ಷರಿಗೆ ಸವಾಲು ಹಾಕಿದ ವೊಲೊಡಿಮಿರ್

ಉಕ್ರೇನ್​​ನಲ್ಲಿ ನಾವು ಅಂದುಕೊಂಡಿರುವ ಗುರಿಯನ್ನು ಸಾಧಿಸಿಯೇ ತೀರುತ್ತೇವೆ ಎಂದು ವಾಡ್ಲಿಮಿರ್​ ಪುಟಿನ್​ ಪುನರುಚ್ಚರಿಸಿದ್ದಾರೆ. ಇದರ ಜೊತೆಗೆ ಭಾರತ ಹಾಗೂ ಚೀನಾ ವಿದ್ಯಾರ್ಥಿಗಳನ್ನು ಉಕ್ರೇನ್​ ಒತ್ತೆಯಾಳಾಗಿಟ್ಟುಕೊಂಡಿದೆ ಎಂದಿದ್ದಾರೆ.

Russia Ukrain war
Russia Ukrain war

By

Published : Mar 3, 2022, 10:07 PM IST

Updated : Mar 3, 2022, 10:59 PM IST

ಮಾಸ್ಕೋ(ರಷ್ಯಾ):ಉಕ್ರೇನ್​ ವಿರುದ್ಧ ಸಮರ ಸಾರಿರುವ ರಷ್ಯಾ ಈಗಾಗಲೇ ಕೆಲವು ನಗರಗಳ ಮೇಲೆ ನಿಯಂತ್ರಣ ಸಾಧಿಸಿದೆ.

ಯುದ್ಧ ಆರಂಭವಾಗಿ ಎಂಟು ದಿನ ಕಳೆಯುತ್ತಾ ಬಂದಿದ್ದು, ಈ ವೇಳೆ ಮಾತನಾಡಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​, ಉಕ್ರೇನ್​​ನಲ್ಲಿ ರಷ್ಯಾ ತನ್ನ ಗುರಿ ಸಾಧಿಸಲಿದೆ ಎಂದಿದ್ದಾರೆ. ಫ್ರೆಂಚ್ ನಾಯಕ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಮಾತುಕತೆ ವೇಳೆ ಮಾತನಾಡಿರುವ ಪುಟಿನ್,​​ ಉಕ್ರೇನ್​ನಲ್ಲಿ ನಾವು ಅಂದುಕೊಂಡಿರುವುದನ್ನು ಸಾಧಿಸಲಿದ್ದೇವೆ ಎಂದಿದ್ದಾರೆ.

ಉಕ್ರೇನ್​ನಲ್ಲಿ ಕೆಟ್ಟ ದಿನಗಳು ಬರಲಿವೆ ಎಂದ ಫ್ರಾನ್ಸ್​: ಉಕ್ರೇನ್​ ದೇಶವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಳ್ಳುವ ಉದ್ದೇಶ ಪುಟಿನ್​ ಹೊಂದಿದ್ದಾರೆ. ಈ ನಿರ್ಧಾರದಿಂದಾಗಿ ಬರುವ ದಿನಗಳು ಉಕ್ರೇನ್​ ಪಾಲಿಗೆ ಕೆಟ್ಟದಾಗಿರಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಉಕ್ರೇನ್ ಯುದ್ಧದಲ್ಲಿ ನಿಷೇಧಿತ ಅಸ್ತ್ರ ಬಳಸುತ್ತಿದೆಯೇ ರಷ್ಯಾ? ಥರ್ಮೋಬ್ಯಾರಿಕ್ ಶಸ್ತ್ರಾಸ್ತ್ರ ಎಂದರೇನು?
ಉಕ್ರೇನ್​-ರಷ್ಯಾ ಕದನ ವಿರಾಮ ಮಾತುಕತೆ: ರಷ್ಯಾ ಮತ್ತು ಉಕ್ರೇನ್​ ನಡುವೆ ಬೆಲಾರಸ್​- ಪೋಲೆಂಡ್ ಗಡಿಯಲ್ಲಿ ಎರಡನೇ ಸುತ್ತಿನ ಶಾಂತಿ ಮಾತುಕತೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಷ್ಯಾ ವಿದೇಶಾಂಗ ಸಚಿವರು, ಸದ್ಯದ ಪರಿಸ್ಥಿತಿ ಕೊನೆಗೊಂಡು ಉಕ್ರೇನ್​ನಲ್ಲಿ ಶಾಂತಿಯುತ ಜೀವನ ನಡೆಸಲು ಅಲ್ಲಿನ ಜನರು ಅನುವು ಮಾಡಿಕೊಡುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.

ನನ್ನೊಂದಿಗೆ ನೇರವಾಗಿ ಮಾತುಕತೆ ಬನ್ನಿ: ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​ ಜೊತೆ ಮಾತನಾಡಿದರೆ ಮಾತ್ರ ಈ ಯುದ್ಧ ನಿಲ್ಲುತ್ತದೆ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಭಿಪ್ರಾಯಪಟ್ಟಿದ್ದು, ನನ್ನೊಂದಿಗೆ ನೇರವಾಗಿ ಮಾತುಕತೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್​ ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದ ಪುಟಿನ್​:ಉಕ್ರೇನ್​ನಲ್ಲಿ ವ್ಯಾಸಂಗ ಮಾಡ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಗಿಟ್ಟುಕೊಂಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಚೀನಾದವರನ್ನೂ ಉಕ್ರೇನ್ ಒತ್ತೆಯಾಳಾಗಿ ಇಟ್ಟುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಾಕ್ಷ್ಯಾಧಾರವಿದೆ ಎಂದಿದ್ದಾರೆ.

Last Updated : Mar 3, 2022, 10:59 PM IST

ABOUT THE AUTHOR

...view details