ಮಾಸ್ಕೋ:ಉಕ್ರೇನ್ ಗಡಿಭಾಗದಲ್ಲಿ ಸೇನಾ ಕವಾಯತಿನಲ್ಲಿ ಪಾಲ್ಗೊಂಡಿದ್ದ ಕೆಲವು ತುಕಡಿಗಳು ತಮ್ಮ ನೆಲೆಗಳಿಗೆ ಹಿಂತಿರುಗಲಿವೆ ಎಂದು ರಷ್ಯಾ ಘೋಷಿಸಿದೆ. ಈ ಮೂಲಕ ಉಕ್ರೇನ್ ಮೇಲೆ ತಕ್ಷಣ ಆಕ್ರಮಣ ನಡೆಸಲು ರಷ್ಯಾ ಯೋಚಿಸಿಲ್ಲ ಎಂಬುದರ ಸೂಚನೆಯಾಗಿದೆ.
ಕ್ಷಿಪಣಿ ನಿಯೋಜನೆ ಮತ್ತು ಮಿಲಿಟರಿ ಪಾರದರ್ಶಕತೆಯ ಮಿತಿಗಳ ಕುರಿತು ಯುಎಸ್ ಮತ್ತು ನ್ಯಾಟೋ ಜೊತೆ ಮಾತುಕತೆಗೆ ಮಾಸ್ಕೋ ಸಿದ್ಧವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಹೇಳಿದ್ದಾರೆ.
ಉಕ್ರೇನ್ ಗಡಿಪ್ರದೇಶಕ್ಕೆ ಶಸ್ತ್ರಾಸ್ತ್ರ ರವಾನೆಯನ್ನು ಮುಂದುವರಿಸಿರುವುದು ಇದಕ್ಕೆ ನಿದರ್ಶನವಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳು ಎಚ್ಚರಿಕೆ ನೀಡಿವೆ. ರಷ್ಯಾದ ಆಕ್ರಮಣದ ಅಪಾಯ ದೂರವಾಗಿಲ್ಲ. ಆದರೆ ಅಪಾಯದಿಂದ ದೂರ ಉಳಿಯುವ ಅವಕಾಶ ಮತ್ತು ಸಮಯ ರಷ್ಯಾಕ್ಕೆ ಇನ್ನೂ ಇದೆ ಎಂದು ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಲಿರ್ ಟ್ರುಸ್ ಹೇಳಿದ್ದಾರೆ. ನಾರ್ವೆ ಕೂಡಾ ಇದೇ ರೀತಿಯ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಓದಿ:ರಾಜ್ಯದಲ್ಲಿ ಇಂದಿನಿಂದ ಪಿಯುಸಿ, ಪದವಿ ತರಗತಿಗಳು ಆರಂಭ
ರಷ್ಯಾದ ಘೋಷಣೆಯ ಬಗ್ಗೆ ಉಕ್ರೇನ್ ನ ಮುಖಂಡರು ಸಂದೇಹ ವ್ಯಕ್ತಪಡಿಸಿದ್ದಾರೆ. ರಷ್ಯಾ ನಿರಂತರವಾಗಿ ವಿಭಿನ್ನ ಹೇಳಿಕೆ ನೀಡುತ್ತಿದೆ. ರಷ್ಯಾದ ಪಡೆ ವಾಪಸಾಗುವುದನ್ನು ಕಂಡರೆ ಮಾತ್ರ ನಾವು ಈ ಹೇಳಿಕೆಯನ್ನು ನಂಬಬಹುದು ಎಂದು ಉಕ್ರೇನ್ ವಿದೇಶ ವ್ಯವಹಾರ ಸಚಿವ ಡಿಮಿಟ್ರೊ ಕುಲೆಬಾ ಹೇಳಿದ್ದಾರೆ. ಈ ಮಧ್ಯೆ, ಸೇನಾ ತುಕಡಿಯ ವಾಪಸಾತಿ ಬಗ್ಗೆ ರಷ್ಯಾದ ಘೋಷಣೆ ಬಿರುಸಿನ ರಾಜತಾಂತ್ರಿಕ ಚಟುವಟಿಕೆಗೆ ನಾಂದಿ ಹಾಡಿದೆ.
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗಿನ ಮಾತುಕತೆಯ ನಂತರ ಮಾತನಾಡಿದ ಪುಟಿನ್, ಉಕ್ರೇನ್ ಮತ್ತು ಇತರ ಮಾಜಿ ಸೋವಿಯತ್ ರಾಷ್ಟ್ರಗಳನ್ನು ನ್ಯಾಟೋದಿಂದ ಹೊರಗಿಡಲು ಮಾಸ್ಕೋದ ಬೇಡಿಕೆಯನ್ನು ಯುಎಸ್ ಮತ್ತು ನ್ಯಾಟೋ ತಿರಸ್ಕರಿಸಿದೆ.
ಯುರೋಪ್‌ನಲ್ಲಿ ಮಧ್ಯಂತರ-ಶ್ರೇಣಿಯ ಕ್ಷಿಪಣಿಗಳ ನಿಯೋಜನೆ, ಡ್ರಿಲ್‌ಗಳ ಪಾರದರ್ಶಕತೆ ಮತ್ತು ಇತರ ವಿಶ್ವಾಸ-ನಿರ್ಮಾಣ ಕ್ರಮಗಳ ಮೇಲಿನ ಮಿತಿಗಳ ಕುರಿತು ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ರಷ್ಯಾ ಸಿದ್ಧವಾಗಿದೆ ಎಂದು ಪುಟಿನ್ ಹೇಳಿದರು. ಆದರೆ ಪಶ್ಚಿಮ ರಷ್ಯಾದ ಪ್ರಮುಖ ಬೇಡಿಕೆಗಳನ್ನು ಗಮನಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.