ಮಾಸ್ಕೋ, ರಷ್ಯಾ:ಯುಎಸ್ ಓಪನ್ನಲ್ಲಿ ವಿಶ್ವನಂಬರ್ ಒನ್ ನೋವಾಕ್ ಜೊಕೊವಿಕ್ ಸೋಲು ಅನುಭವಿಸಿದ್ದು, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಮಡ್ವೆಡೆವ್ ಅವರನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದಿಸಿದ್ದಾರೆ.
ಇದೊಂದು ಬ್ರಿಲಿಯಂಟ್ ವಿಕ್ಟರಿ ಎಂದು ಬಣ್ಣಿಸಿರುವ ಪುಟಿನ್ ಯುಎಸ್ ಓಪನ್ ಫೈನಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ಕೌಶಲ್ಯ ಮತ್ತು ಪರಿಶ್ರಮವನ್ನು ನೀವು ಪ್ರದರ್ಶಿಸಿದ್ದೀರಿ ಎಂದಿರುವ ಅವರು ನಿಮ್ಮ ಎದುರಾಳಿಗೆ ಯಾವುದೇ ಅವಕಾಶ ನೀಡದೇ, ಆತ್ಮವಿಶ್ವಾಸದಿಂದ ಆಟವಾಡುವ ಮೂಲಕ ಗೆಲುವು ಸಾಧಿಸಿದ್ದೀರಿ ಎಂದು ಮೆಡ್ವೆಡೆವ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮರಿಯಾ ಜಖರೋವಾ ಅವರು ಮೆಡ್ವೆಡೆವ್ ಅವರನ್ನು ಅಭಿನಂದಿಸಿದ್ದಾರೆ. ಮೆಡ್ವಡೆವ್ ಅವರು ಇತಿಹಾಸದ ಶ್ರೇಷ್ಠ ಟೆನಿಸ್ ಆಟಗಾರ ಎಂದು ಬಣ್ಣಿಸಿದ್ದಾರೆ.