ಕರ್ನಾಟಕ

karnataka

ETV Bharat / international

ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿ ಸುಳ್ಳು -ಮಾತುಕತೆಗೆ ಸಿದ್ಧ ಆದರೆ ಷರತ್ತುಗಳು ಅನ್ವಯ ಎಂದ ಪುಟಿನ್​​ - ಉಕ್ರೇನ್ ನಗರಗಳ ಬಾಂಬ್ ದಾಳಿಯನ್ನು ನಿರಾಕರಿಸಿದ ಪುಟಿನ್

ಉಕ್ರೇನ್ ನಗರಗಳ ಬಾಂಬ್ ದಾಳಿಯನ್ನು ನಿರಾಕರಿಸಿದ ಪುಟಿನ್, ಬೇಡಿಕೆಗಳು ಈಡೇರಿದರೆ ಮಾತುಕತೆಗೆ ಸಿದ್ಧ ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದಾರೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Mar 5, 2022, 7:53 AM IST

Updated : Mar 5, 2022, 8:16 AM IST

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ರಷ್ಯಾದ ಪಡೆಗಳು ಉಕ್ರೇನಿಯನ್ ನಗರಗಳಲ್ಲಿ ಬಾಂಬ್ ದಾಳಿ ನಡೆಸುತ್ತಿವೆ ಎಂಬುವುದನ್ನು ನಿರಾಕರಿಸಿದ್ದಾರೆ.

"ಕೀವ್​ ಮತ್ತು ಇತರ ದೊಡ್ಡ ನಗರಗಳಲ್ಲಿ ನಡೆಯುತ್ತಿರುವ ವೈಮಾನಿಕ ದಾಳಿಗಳ ಬಗ್ಗೆ ವರದಿ ನಕಲಿ" ಎಂದು ಪುಟಿನ್ ಹೇಳಿದರು. ಅಲ್ಲದೇ ರಷ್ಯಾ ಉಕ್ರೇನ್​​ ಜತೆಗೆ ಮಾತುಕತೆಗೆ ಮುಕ್ತವಾಗಿದೆ. ಆದರೆ, ರಷ್ಯಾದ ಎಲ್ಲ ಬೇಡಿಕೆಗಳನ್ನು ಪೂರೈಸುವ ಷರತ್ತಿನ ಅಡಿ ಮಾತ್ರ ತಾವು ಮಾತುಕತೆಗೆ ಸಿದ್ಧ ಎಂದು ಅವರು ಹೇಳಿದರು.

ಇವುಗಳಲ್ಲಿ ಉಕ್ರೇನ್‌ನ ತಟಸ್ಥ ಮತ್ತು ಪರಮಾಣು ರಹಿತ ಸ್ಥಿತಿ, ಅದರ "ಡೆನಾಜಿಫಿಕೇಶನ್", ಕ್ರಿಮಿಯಾವನ್ನು ರಷ್ಯಾದ ಭಾಗವಾಗಿ ಗುರುತಿಸುವುದು ಮತ್ತು ಪೂರ್ವ ಉಕ್ರೇನ್‌ನಲ್ಲಿನ ಪ್ರತ್ಯೇಕತಾವಾದಿ ಪ್ರದೇಶಗಳ "ಸಾರ್ವಭೌಮತ್ವ" ವಿಚಾರವೂ ಮಾತುಕತೆ ಷರತ್ತಿನಲ್ಲಿ ಸೇರ್ಪಡೆಗೊಂಡಿವೆ.

ಯೋಜಿತ ಮೂರನೇ ಸುತ್ತಿನ ಮಾತುಕತೆ ಸಮಯದಲ್ಲಿ ಕೀವ್​​ ಪ್ರತಿನಿಧಿಗಳು ಸಮಂಜಸವಾದ ಮತ್ತು ರಚನಾತ್ಮಕ ನಿರ್ಧರವನ್ನು ತೆಗೆದುಕೊಳ್ಳುತ್ತಾರೆ ಎಂಬ ಭರವಸೆಯನ್ನು ರಷ್ಯಾ ವ್ಯಕ್ತಪಡಿಸಿದೆ. ಕೀವ್​​​​​​​​​ ಸಮಾಲೋಚಕರೊಬ್ಬರ ಪ್ರಕಾರ, ವಾರಾಂತ್ಯದಲ್ಲಿ ರಷ್ಯಾ ಮತ್ತು ಉಕ್ರೇನ್‌ ನಿಯೋಗಗಳು ಮೂರನೇ ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ಈಗಾಗಲೇ ಎರಡು ಸುತ್ತಿನ ಮಾತುಕತೆ ಮುಗಿದಿವೆ. ಮೊದಲ ಸಭೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿರಲಿಲ್ಲ. ಆದರೆ ಎರಡನೇ ಸುತ್ತಿನ ಮಾತುಕತೆ ವೇಳೆ, ಯುದ್ಧದಲ್ಲಿ ಸಂತ್ರಸ್ತರಾದವರ ನೆರವಿಗೆ ಎರಡೂ ಕಡೆ ಒಪ್ಪಿಗೆ ಸೂಚಿಸಲಾಗಿದೆ. ಅಷ್ಟೇ ಅಲ್ಲ ಮಾನವೀಯ ಕಾರಿಡಾರ್​ ರಚನೆಗೆ ಒಪ್ಪಿಕೊಳ್ಳಲಾಗಿದೆ. ಆದರೆ ಇದುವರೆಗೂ ಕದನ ವಿರಾಮ ಘೋಷಣೆ ಮಾಡುವ ವಿಚಾರಕ್ಕೆ ರಷ್ಯಾ ಯಾವುದೇ ಸೊಪ್ಪು ಹಾಕಿಲ್ಲ. ಒಂದು ಕಡೆ ದಾಳಿ ತೀವ್ರಗೊಳಿಸುತ್ತಾ ಸಾಗಿದೆ.

ಇದನ್ನೂ ಓದಿ:Great Escape: ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ನಡೆದಿತ್ತು 3 ಬಾರಿ ಯತ್ನ.. ಆದರೆ ಸಂಚು ವಿಫಲ!


Last Updated : Mar 5, 2022, 8:16 AM IST

ABOUT THE AUTHOR

...view details