ಕರ್ನಾಟಕ

karnataka

ETV Bharat / international

ಸುಪ್ತಾವಸ್ಥೆಯ ಪಕ್ಷಪಾತ ಏನೆಂದು ನನಗೆ ತಿಳಿದಿರಲಿಲ್ಲ: ಪ್ರಿನ್ಸ್ ಹ್ಯಾರಿ - ರಾಜಕುಮಾರ ಹ್ಯಾರಿ ಹಾಗೂ ಮೇಘನ್ ಮಾರ್ಕೆಲ್ ದಂಪತಿ

ಈ ವರ್ಷದ ಆರಂಭದಲ್ಲಿ ರಾಜಕುಮಾರ ಹ್ಯಾರಿ ಹಾಗೂ ಮೇಘನ್ ಮಾರ್ಕೆಲ್ ದಂಪತಿಗಳು ಸ್ವಾವಲಂಬಿಯಾಗಲು ಬಯಸಿದ್ದಾರೆಂದು ಹೇಳಿ ರಾಯಲ್ ಕರ್ತವ್ಯದಿಂದ ದೂರ ಸರಿದರು..

harry
harry

By

Published : Oct 26, 2020, 11:43 PM IST

ಲಂಡನ್:ತನ್ನ ಸವಲತ್ತು ತುಂಬಿದ ಜೀವನ, ಸುಪ್ತಾವಸ್ಥೆಯ ಪಕ್ಷಪಾತದ (unconscious bias) ವಾಸ್ತವತೆಯಿಂದ ತನ್ನನ್ನು ಹೇಗೆ ರಕ್ಷಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಹಾಗೂ ಮೇಘನ್ ಮಾರ್ಕೆಲ್​ಗೆ ಹಲವು ಸಮಯ ಹಾಗೂ ಅನುಭವ ಬೇಕಾಯಿತು ಎಂದು ಬ್ರಿಟನ್‌ನ ರಾಜಕುಮಾರ ಹ್ಯಾರಿ ಹೇಳಿದ್ದಾರೆ.

ನನ್ನ ತಿಳುವಳಿಕೆಯಿಂದ, ನನ್ನಲ್ಲಿರುವ ಪಾಲನೆ ಮತ್ತು ಶಿಕ್ಷಣದಿಂದ ಸುಪ್ತಾವಸ್ಥೆಯ ಪಕ್ಷಪಾತ ಏನೆಂದು ನನಗೆ ತಿಳಿದಿರಲಿಲ್ಲ ಹ್ಯಾರಿ ಹೇಳಿದರು.

ಅದು ಅಸ್ತಿತ್ವದಲ್ಲಿದೆ ಎಂದು ಕೂಡ ನನಗೆ ತಿಳಿದಿರಲಿಲ್ಲ. ಅದನ್ನು ಅರಿತುಕೊಳ್ಳಲು ನನಗೆ ಹಲವು ವರ್ಷಗಳು ಬೇಕಾಯಿತು ಎಂದರು.

ರಾಣಿ ಎಲಿಜಬೆತ್ IIರ ಮೊಮ್ಮಗ ಹ್ಯಾರಿ ರಾಜಮನೆತನದಲ್ಲಿ ಬೆಳೆದರು ಮತ್ತು ಬ್ರಿಟಿಷ್ ಸೈನ್ಯದಲ್ಲಿ ಸೇವೆ ಸಲ್ಲಿಸುವ ಮೊದಲು ವಿಶೇಷ ಪ್ರಾಥಮಿಕ ಶಾಲೆಯಾದ ಈಟನ್‌ನಲ್ಲಿ ಶಿಕ್ಷಣ ಪಡೆದರು. ಅಮೆರಿಕಾದ ಟಿವಿ ತಾರೆ ಮೇಘನ್ ಅವರನ್ನು 2018ರಲ್ಲಿ ವಿವಾಹವಾದರು.

ಈ ವರ್ಷದ ಆರಂಭದಲ್ಲಿ ದಂಪತಿ ಸ್ವಾವಲಂಬಿಯಾಗಲು ಬಯಸಿದ್ದಾರೆಂದು ಹೇಳಿ ರಾಯಲ್ ಕರ್ತವ್ಯದಿಂದ ದೂರ ಸರಿದರು. ಆಗಸ್ಟ್​ನಲ್ಲಿ ಅವರು ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ಕೌಂಟಿಯ ಬಹು-ಮಿಲಿಯನ್ ಡಾಲರ್ ಎಸ್ಟೇಟ್​ಗೆ ತೆರಳಿದರು.

ABOUT THE AUTHOR

...view details