ಕರ್ನಾಟಕ

karnataka

ETV Bharat / international

CoP26 Summit in Glasgow: ಬಿಲ್‌ಗೇಟ್ಸ್ ಭೇಟಿ ಮಾಡಿ ಮಾತುಕತೆ ನಡೆಸಿದ ಮೋದಿ - ಪ್ರಧಾನಿ ಮೋದಿ ಭೇಟಿಯಾದ ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಚರ್ಚಿಸಿದರು.

Prime Ministers meeting with Mr Bill Gates
Prime Ministers meeting with Mr Bill Gates

By

Published : Nov 2, 2021, 8:54 PM IST

ಗ್ಲಾಸ್ಗೋ:ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಯುಕೆಯ ಗ್ಲಾಸ್ಗೋದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಕೋಪ್ 26 ಶೃಂಗಸಭೆಯ ಮಧ್ಯೆ ಮೋದಿ ಮತ್ತು ಬಿಲ್ ಗೇಟ್ಸ್ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಭಾರತದಲ್ಲಿ ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಷನ್​ ಮಾಡಿರುವ ಸೇವೆಯ ಬಗ್ಗೆ ಈ ವೇಳೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಿಷನ್ ಇನೋವೇಷನ್ ಪ್ರಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಲ್ ಗೇಟ್ಸ್ ವಿವರಿಸಿದರು. ಜೊತೆಗೆ ಭಾರತದ ಈ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಿದರು. ಗ್ರೀನ್ ಹೈಡ್ರೋಜನ್, ವಿಮಾನಯಾನ ತೈಲ, ಬ್ಯಾಟರಿ ಸ್ಟೋರೇಜ್ ಮತ್ತು ಲಸಿಕೆ ಸಂಶೋಧನೆ ಬಗ್ಗೆ ಇದೇ ವೇಳೆ ಇಬ್ಬರೂ ಮಾತುಕತೆ ನಡೆಸಿದ್ದಾರೆ.

ABOUT THE AUTHOR

...view details