ಕರ್ನಾಟಕ

karnataka

ETV Bharat / international

ವದಂತಿ ಹಬ್ಬುವುದು ಕೋವಿಡ್​ಗಿಂತ ಕೆಟ್ಟದ್ದು : ಪೋಪ್​ ಫ್ರಾನ್ಸಿಸ್​ - ಪೋಪ್​ ಫ್ರಾನ್ಸಿಸ್​ ಹೇಳಿಕೆ

ಯಾರಾದರೂ ತಪ್ಪು ಮಾಡಿದ್ರೆ ಅವರನ್ನು ಖಾಸಗಿಯಾಗಿ ತಿಳಿ ಹೇಳಿ ಸರಿಪಡಿಸುವ ಬಗ್ಗೆ ಮಾತನಾಡುವಾಗ ಫ್ರಾನ್ಸಿಸ್​ ಈ ಮಾತು ಹೇಳಿದ್ದಾರೆ..

Pope: Gossiping is "plague worse than COVID"
ಪೋಪ್​ ಫ್ರಾನ್ಸಿಸ್​

By

Published : Sep 6, 2020, 6:16 PM IST

ವ್ಯಾಟಿಕನ್​ ಸಿಟಿ :ಕ್ಯಾಥೋಲಿಕ್​ ಚರ್ಚ್‌ನ ವಿಭಜಿಸಲು ಪ್ರಯತ್ನಿಸುತ್ತಿರುವ ವದಂತಿ ಕೋವಿಡ್​ಗಿಂತ ಕೆಟ್ಟದ್ದಾಗಿದೆ ಎಂದು ಪೋಪ್​ ಫ್ರಾನ್ಸಿಸ್​ ಹೇಳಿದ್ದಾರೆ.

ವ್ಯಾಟಿಕನ್​ ಸಿಟಿಯಲ್ಲಿ ಭಾನುವಾರದ ಆಶೀರ್ವಾದದ ಸಂದರ್ಭದಲ್ಲಿ ಮಾತನಾಡಿದ ಅವರು, ಅಧಿಕಾರಶಾಹಿಗಳು ವದಂತಿಗಳನ್ನು ಹಬ್ಬುವ ಮೂಲಕ ಚರ್ಚ್‌ನ ಇಬ್ಭಾಗ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಕೋವಿಡ್​ ಮಹಾಮಾರಿಗಿಂತಲೂ ಕೆಟ್ಟದ್ದಾಗಿದೆ. ಆದ್ದರಿಂದ ಸಹೋದರರೇ ದಯವಿಟ್ಟು ವದಂತಿಗಳಿಂದ ದೂರವಿರೋಣ ಎಂದು ಮನವಿ ಮಾಡಿದ್ದಾರೆ.

ಯಾರಾದರೂ ತಪ್ಪು ಮಾಡಿದ್ರೆ ಅವರನ್ನು ಖಾಸಗಿಯಾಗಿ ತಿಳಿ ಹೇಳಿ ಸರಿಪಡಿಸುವ ಬಗ್ಗೆ ಮಾತನಾಡುವಾಗ ಫ್ರಾನ್ಸಿಸ್​ ಈ ಮಾತು ಹೇಳಿದ್ದಾರೆ. ಯಾರೂ ವದಂತಿ ಹಬ್ಬುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ.

ABOUT THE AUTHOR

...view details