ವ್ಲಾಡಿವೊಸ್ಟೊಕ್(ರಷ್ಯಾ):ಮೂರು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಭಾರತ-ರಷ್ಯಾ ಸಂಬಂಧ ಸದ್ಯ ಮತ್ತೊಂದು ಹಂತ ತಲುಪಲಿದೆ ಎಂದಿರುವ ಪ್ರಧಾನಿ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಆಂತರಿಕ ವಿಚಾರದಲ್ಲಿ ಮೂರನೇ ದೇಶದ ಮಧ್ಯಪ್ರವೇಶ ವಿಚಾರದಲ್ಲಿ ಭಾರತ-ರಷ್ಯಾ ಎರಡೂ ದೇಶಗಳು ಒಂದೇ ನಿಲುವನ್ನು ಹೊಂದಿದೆ. ಉಭಯ ದೇಶಗಳು ಆಂತರಿಕ ಸಮಸ್ಯೆ ಬಗೆಹರಿಸಲು ಮತ್ತೊಂದು ರಾಷ್ಟ್ರದ ಪಾತ್ರವನ್ನು ಉಭಯ ದೇಶಗಳಿಗೆ ಇಷ್ಟವಿಲ್ಲ ಎಂದು ಪ್ರಧಾನಿ ಮೋದಿ ನುಡಿದಿದ್ದಾರೆ.
ಚೆನ್ನೈನಿಂದ ರಷ್ಯಾದ ವ್ಲಾಡಿವೊಸ್ಟೊಕ್ಗೆ ಸಮುದ್ರಯಾನವನ್ನು ಕಲ್ಪಿಸಲು ಸಲುವಾಗಿ ಪ್ರಸ್ತಾವನೆಯನ್ನು ರಷ್ಯಾದ ಮುಂದಿಡಲಾಗಿದೆ ಎಂದು ಮೋದಿ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.