ಕರ್ನಾಟಕ

karnataka

ETV Bharat / international

ಸರ್ಬಿಯನ್ ಆರ್ಥೊಡಾಕ್ಸ್ ಚರ್ಚ್​ನ ಮುಖ್ಯಸ್ಥ ಕೊರೊನಾಗೆ ಬಲಿ

ಸರ್ಬಿಯನ್ ಆರ್ಥೊಡಾಕ್ಸ್ ಚರ್ಚ್​ನ ಮುಖ್ಯಸ್ಥ ಪ್ಯಾಟ್ರಿಯಾರ್ಕ್ ಇರಿನೆಜ್ (90) ಕೊರೊನಾಗೆ ಬಲಿಯಾಗಿದ್ದಾರೆ. ನವೆಂಬರ್ ಆರಂಭದಲ್ಲಿ ಕೊರೊನಾ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಸರ್ಬಿಯನ್ ಆರ್ಥೊಡಾಕ್ಸ್ ಚರ್ಚ್​ನ ಮುಖ್ಯಸ್ಥ ಪ್ಯಾಟ್ರಿಯಾರ್ಕ್ ಇರಿನೆಜ್
ಸರ್ಬಿಯನ್ ಆರ್ಥೊಡಾಕ್ಸ್ ಚರ್ಚ್​ನ ಮುಖ್ಯಸ್ಥ ಪ್ಯಾಟ್ರಿಯಾರ್ಕ್ ಇರಿನೆಜ್

By

Published : Nov 20, 2020, 3:46 PM IST

ಬೆಲ್ಗ್ರೇಡ್ (ಸರ್ಬಿಯಾ):ಸರ್ಬಿಯನ್ ಆರ್ಥೊಡಾಕ್ಸ್ ಚರ್ಚ್​ನ ಮುಖ್ಯಸ್ಥ 90 ವರ್ಷದ ಪ್ಯಾಟ್ರಿಯಾರ್ಕ್ ಇರಿನೆಜ್ ಕೊರೊನಾದಿಂದ ನಿಧನರಾಗಿದ್ದಾರೆ ಎಂದು ಸರ್ಬಿಯಾದ ರಾಜ್ಯ ಮಾಧ್ಯಮ ತಿಳಿಸಿದೆ.

ಇನ್ನು ಈ ಬಗ್ಗೆ ಸೆರ್ಬಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವ್ಯೂಸಿಕ್​ ಇನ್​ಸ್ಟಾಗ್ರಾಂನಲ್ಲಿ ಫೋಟೋದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. 'ನಿಮ್ಮ ಒಡನಾಟದ ಬಗ್ಗೆ ತಿಳಿದಿರುವುದಕ್ಕೆ ಗೌರವವಿದೆ' ಎಂದು ಶೀರ್ಷಿಕೆ ಬರೆದು ಕಪ್ಪು- ಬಿಳುಪಿನ ಚಿತ್ರವೊಂದನ್ನು ಶೇರ್​ ಮಾಡಿದ್ದಾರೆ.

ಈ ಹಿಂದೆ ಮಾಂಟೆನೆಗ್ರೊದ ಸರ್ಬಿಯನ್ ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥ ಬಿಷಪ್ ಅಮ್ಫಿಲೋಹಿಜೆ ಅವರ ಅಂತ್ಯಕ್ರಿಯೆಯಲ್ಲಿ ಪ್ಯಾಟ್ರಿಯಾರ್ಕ್ ಇರಿನೆಜ್ ಪಾಲ್ಗೊಂಡಿದ್ದರು. ಈ ಬಳಿಕ ನವೆಂಬರ್ ಆರಂಭದಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕೊರೊನಾದಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಕಂಡು ಬಂದು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪ್ರಕಟಿಸಿದ್ದರೂ ಅವುಗಳನ್ನು ಉಲ್ಲಂಘಿಸಿ ಅಂತ್ಯಕ್ರಿಯೆಯಲ್ಲಿ ಮಾಂಟೆನೆಗ್ರೊ ರಾಜಧಾನಿ ಪೊಡ್ಗೊರಿಕಾದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಇನ್ನು ಇವರು 2010ರ ಜನವರಿಯಲ್ಲಿ ತನ್ನ ತಂದೆ ಪಾವ್ಲೆ ಮರಣದ ನಂತರ ಚರ್ಚ್‌ನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು.

ABOUT THE AUTHOR

...view details