ಬ್ರಿಟಿಷ್ ಬರಹಗಾರ ಮತ್ತು ವಿಮರ್ಶಕ ಆಡ್ರಿಯನ್ ಗಿಲ್ ಹೇಳುವಂತೆ ಬ್ರಿಟಿಷರು ರಾಜಕಾರಣಿಗಳನ್ನು ದ್ವೇಷಿಸುತ್ತಾರೆ. ಎಷ್ಟು ದ್ವೇಷಿಸುತ್ತಾರೆಂದರೆ, ಬ್ರಿಟಿಷರು ಸ್ವಯಂ ಮಹತ್ವದ ವಿಷಯಗಳಿಗೆ ಕೊಡುವಷ್ಟು ಗಮನವನ್ನು ಹಣಕಾಸು ಅಥವಾ ವ್ಯವಹಾರದ ವಿಷಯದಲ್ಲಿ ನೀಡುವುದಿಲ್ಲ. ಇತ್ತೀಚಿನ ರಾಜಕಾರಣಿಗಳ ಪ್ರಯತ್ನ ಹತ್ತು ವರ್ಷಗಳಲ್ಲಿ ನಾಲ್ಕು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವಂತೆ ಒತ್ತಡ ಹೇರಿರುತ್ತಾರೆ ಎಂದಿದ್ದಾರೆ.
ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹದಲ್ಲಿ ಪ್ರತಿಕೂಲ ಫಲಿತಾಂಶ ಬಂದ ಕಾರಣ, ಡೇವಿಡ್ ಕ್ಯಾಮರೂನ್ ರಾಜೀನಾಮೆ ನೀಡಿದ್ದರಿಂದ ಕನ್ಸರ್ವೇಟಿವ್ ಪಕ್ಷದ ಮಾಜಿ ಪ್ರಧಾನಿ ಥೆರೆಸಾ ಮೇ ಅವರು 2016 (ಜೂನ್ 23) ರಂದು ಸರಳವಾದ ಬಹುಮತವನ್ನು ಪಡೆದಿದ್ದರು. (650 ಸದಸ್ಯರ ಸಂಸತ್ತಿನಲ್ಲಿ 330 ಸಂಸದರು). ಪಿಎಂ ಕ್ಯಾಮರೂನ್ ಅವರ ಇತ್ತೀಚಿನ ಪುಸ್ತಕ "ದೊಡ್ಡ ವಿಷಾದದ ಸಂಗತಿಯೆಂದರೆ" ಅಲ್ಲಿ ಯೂರೋಪ್ ಯೂನಿಯನ್ನಿನಲ್ಲಿ ಉಳಿಯುವ ಕುರಿತು ವಹಿಸಿಕೊಂಡು ಮಾತಾಡಿದವರು ಮತಗಳನ್ನು ಕಳೆದುಕೊಂಡರು. ಇದು ಅಂತಿಮವಾಗಿ ದೇಶವನ್ನು ವಿಭಜಿಸಿ, ಸರ್ಕಾರವನ್ನು ಅಸ್ವಸ್ಥಗೊಳಿಸಿ, ಯಾವುದೇ ಒಪ್ಪಂದಗಳಿಲ್ಲದೆ ಬ್ರಿಟನ್, ಯುರೋಪಿಯನ್ ಯೂನಿಯನ್ ತೊರೆಯುವಂತೆ ಮಾಡಿತು ಎಂದು ತಿಳಿಸಿದ್ದಾರೆ.
ಬ್ರೆಕ್ಸಿಟ್ ಮಾತುಕತೆಗಳಲ್ಲಿ ತನ್ನ ಕೈಯನ್ನು ಬಲಪಡಿಸಿದ ಮತದಾರರಿಂದ ದೊಡ್ಡ ಬಹುಮತವನ್ನು ಪಡೆದುಕೊಳ್ಳಬಹುದೆಂದು ನಂಬಿದ್ದ ಥೆರೆಸಾ ಮೇ, ಜೂನ್ 2017 ರಲ್ಲಿ ನಿಗದಿತ ಸಮಯಕ್ಕಿಂತ ಸುಮಾರು ಮೂರು ವರ್ಷಗಳ ಮುಂಚಿತವಾಗಿ ಅವಧಿ ಪೂರ್ವ ಮತದಾನಕ್ಕೆ ತೆರಳಲು ನಿರ್ಧರಿಸಿದರು. ಕೆರಳಿದ ಮತದಾರನು 13 ಸ್ಥಾನಗಳನ್ನು ಕಸಿದುಕೊಂಡು ಅಸ್ಥಿರ ಅಲ್ಪಸಂಖ್ಯಾತ ಸರ್ಕಾರಕ್ಕೆ ಕಾರಣನಾದರು.
ಬ್ರೆಕ್ಸಿಟ್ ವಿಷಯವು ರಾಷ್ಟ್ರದಾದ್ಯಂತ ಆಳವಾದ ರಾಜಕೀಯ ಬಿರುಕುಗಳನ್ನು ಉಂಟುಮಾಡಿದೆ. ಮೇಲುಗೈ ಸಾಧಿಸಿದಂತೆ ಕಂಡುಬರುವ ‘ಲೀವ್ ಇಯು’ ವಿಭಾಗವು ಯುರೋಪಿಯನ್ ಒಕ್ಕೂಟವು ಬ್ರಿಟಿಷ್ ಸಾರ್ವಭೌಮತ್ವವನ್ನು ಅತಿ ಕ್ರಮಿಸಿದೆ ಎಂದು ನಂಬಿದ್ದು, ಅದನ್ನು ಪುನಃ ಪಡೆದುಕೊಳ್ಳಬೇಕಾಗಿದೆ ಎಂದು ಭಾವಿಸುತ್ತದೆ. ಆದಾಗ್ಯೂ, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್, ಬ್ರೆಕ್ಸಿಟ್ ಅನ್ನು ತೀವ್ರವಾಗಿ ವಿರೋಧಿಸುತ್ತವೆ. ಯುರೋಪಿಯನ್ ಯೂನಿಯನ್ ತೊರೆಯುವ ಪ್ರಧಾನಿ ಮೇ ಅವರ ಪ್ರಸ್ತಾಪವನ್ನು ಮೂರು ಬಾರಿ ಸಂಸತ್ತು ತಿರಸ್ಕರಿಸಿತು. ಈ ವರ್ಷ ಜೂನ್‌ನಲ್ಲಿ ಅಧಿಕಾರವನ್ನು ತ್ಯಜಿಸುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯಿರಲಿಲ್ಲ.
ಈ ಬೆಳವಣಿಗೆಯು ಜುಲೈ 24 ರಂದು ದೀರ್ಘಕಾಲದ ಆಕಾಂಕ್ಷಿ ಮತ್ತು ಬ್ರೆಕ್ಸಿಟ್ ಸಮರ್ಥಕ ಬೋರಿಸ್ ಜಾನ್ಸನ್ ಅವರನ್ನು ಅಧಿಕಾರಕ್ಕೆ ಕರೆತಂದಿತು. ತನ್ನ ಹಿಂದಿನ ಅವತಾರದಲ್ಲಿ ಬ್ರಸೆಲ್ಸ್ ಮೂಲದ ಪತ್ರಕರ್ತನಾಗಿದ್ದ ಅವರು ಬ್ರಿಟನ್ಅನ್ನು ಇಯುನಿಂದ ಹೊರಹಾಕುವಂತೆ ಸಕ್ರಿಯವಾಗಿ ಪ್ರಚಾರ ಮಾಡಿದ್ದರು. 17 ಅಕ್ಟೋಬರ್ 2019 ರಂದು ಅವರು ಇಯು ಜೊತೆ ಬ್ರೆಕ್ಸಿಟ್ ಒಪ್ಪಂದವನ್ನು ಮಾಡಿಕೊಂಡರು. ಇದು ನಮ್ಮ ದೇಶಕ್ಕೆ ದೊಡ್ಡ ವಿಷಯ. ಇಯುನಲ್ಲಿರುವ ನಮ್ಮ ಸ್ನೇಹಿತರಿಗೂ ಇದು ತುಂಬಾ ಒಳ್ಳೆಯದು ಎಂದು ನಾನು ನಂಬುತ್ತೇನೆ ಎಂದು ಆ ಸಮಯದಲ್ಲಿ ಹೇಳಿದ್ದರು. ಅದೇನೇ ಇದ್ದರೂ, ಸರ್ಕಾರವನ್ನು ಮುಳುಗದಂತೆ ಕಾಯುತ್ತಿರುವ ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ (ಡಿಯುಪಿ) ಸೇರಿದಂತೆ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಒಪ್ಪಂದವನ್ನು ವಿರೋಧಿಸಿ, ಹೋರಾಟವನ್ನು ನಾಗರಿಕರ ನ್ಯಾಯಾಲಯಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದವು. ಈಗ ಡಿಸೆಂಬರ್ 12 ರಂದು ಮತದಾನ ನಿಗದಿಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ.
ಭಾರತ ಬ್ರೆಕ್ಸಿಟ್ ಅನ್ನು ಹೇಗೆ ನೋಡಬೇಕು? ಇದು ಬ್ರಿಟನ್‌ನ ನೀತಿಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ? ಎಂದು ಜುಲೈ 2018 ರಲ್ಲಿ ಪ್ರಧಾನಿ ಮೇ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ದೃಷ್ಟಿಕೋನವನ್ನು ಒದಗಿಸಿ ಕೊಟ್ಟಿದ್ದಾರೆ. ನಾವು ಕಾರ್ಯತಂತ್ರದ ಸಹಭಾಗಿತ್ವವನ್ನು ರೂಪಿಸುವಾಗ ಭವಿಷ್ಯವನ್ನು ನೋಡಬೇಕೆಂದು ನಾನು ಬಯಸುತ್ತೇನೆ. ಯುಕೆ, ಇಯುವನ್ನು ತೊರೆದಾಗ ಮತ್ತು ಭಾರತ ಮುಂದಿನ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಲಾಗಿತ್ತು. ಇದರಿಂದ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಮೇಲೆ ವೀಸಾ ನಿರ್ಬಂಧವನ್ನು ಸರಾಗಗೊಳಿಸಬಹುದು. ಪ್ರವೇಶ ಮತ್ತು ಉದ್ಯೋಗದ ಅಡೆತಡೆಗಳಿಂದಾಗಿ 2010-11ರಲ್ಲಿ 39,090 ರಷ್ಟಿದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯು 2016-17ರಲ್ಲಿ 16,550 ಕ್ಕೆ ಇಳಿದಿದ್ದು, ಇಳಿಕೆಯ ಪ್ರಮಾಣವು 50% ಮೀರಿದೆ.