ಲಂಡನ್:ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ವಿಚಾರವನ್ನು ಚರ್ಚಿಸಲು ವಿಶ್ವಸಂಸ್ಥೆ ತುರ್ತು ಸಭೆಯನ್ನು ಆಯೋಜಿಸಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪಾಕಿಸ್ತಾನ ಪತ್ರ ಬರೆದಿದೆ.
ಕಾಶ್ಮೀರವನ್ನು ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಪಾಕಿಸ್ತಾನವನ್ನು ಪ್ರಚೋದನೆ ಮಾಡಿಲ್ಲ, ಆದರೆ ನಮ್ಮ ತಾಳ್ಮೆಯನ್ನು ದೌರ್ಬಲ್ಯ ಎಂದು ಭಾರತ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಭಾರತಕ್ಕೆ ಎಚ್ಚರಿಕೆ ನೀಡುವ ರೀತಿಯಲ್ಲಿ ಪತ್ರ ಬರೆದಿದ್ದಾರೆ.
ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ... ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ಅಸಾಧ್ಯ ಎಂದ ಟ್ರಂಪ್..!
ನಮ್ಮ ದೇಶದೊಂದಿಗೆ ಭಾರತ ಯುದ್ಧಕ್ಕಿಳಿದರೆ ನಮ್ಮ ರಕ್ಷಣೆಗೋಸ್ಕರ ನಾವು ಪ್ರತಿದಾಳಿ ಮಾಡಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬರೆದಿರುವ ಪತ್ರದಲ್ಲಿ ಪಾಕ್ ಈ ಅಂಶವನ್ನು ಉಲ್ಲೇಖ ಮಾಡಿದೆ.
ಚೀನಾ ಮೌನ, ಪೋಲಂಡ್ ತಟಸ್ಥ:
ಕಾಶ್ಮೀರ ವಿಚಾರ ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿರುವ ವೇಳೆಯಲ್ಲಿ ಚೀನಾ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಭಾರತವನ್ನು ಎದುರಾಳಿಯಾಗಿ ಕಾಣುಚ ಚೀನಾ ಪಾಕ್ ಜೊತೆಗೆ ಇದೇ ಕಾರಣಕ್ಕೆ ಉತ್ತಮ ಸಂಬಂಧ ಹೊಂದಿದೆ. ಆದರೆ ಕಾಶ್ಮೀರ ವಿಚಾರದಲ್ಲಿ ಮಾತ್ರ ಮೌನವಾಗಿದೆ.
ಇತ್ತ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ಹೊಂದಿರುವ ಪೋಲಂಡ್ ಸಹ ಈ ವಿಚಾರವನ್ನು ಉಭಯ ದೇಶಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದಿದೆ.