ಕರ್ನಾಟಕ

karnataka

ETV Bharat / international

ಖಲಿಸ್ತಾನ್​ ಪ್ರತ್ಯೇಕತಾವಾದಿ ಚಳವಳಿ ಉತ್ತೇಜಿಸಲು ಪ್ಲಾನ್​.. ಮುಂದುವರಿದ ಪಾಕ್​ ನರಿ ಬುದ್ಧಿ - 'ಖಲಿಸ್ತಾನ್: ಪಾಕಿಸ್ತಾನದ ಯೋಜನೆ'

ಯುರೋಪಿನ ಪ್ರಮುಖ ಭಾಗಗಳಲ್ಲಿ ಭಾರತ ವಿರೋಧಿ ಪ್ರತಿಭಟನೆಗಳನ್ನು ಸೃಷ್ಟಿಸಲು ಪಾಕಿಸ್ತಾನವು ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಗಳನ್ನು ಬಳಸುತ್ತಿದೆ. ಈ ಮೂಲಕ ಪಾಕ್​ ತನ್ನ ನರಿ ಬುದ್ಧಿಯನ್ನು ಮುಂದುವರಿಸಿದೆ.

Pakistan
ಪಾಕಿಸ್ತಾನ

By

Published : Dec 13, 2020, 4:35 PM IST

ಒಟ್ಟಾವಾ (ಕೆನಡಾ): ಬೇರೆ ದೇಶಗಳಿಗೆ ಹೋಲಿಸಿದರೆ ಯುರೋಪ್​ನ ರಾಷ್ಟ್ರಗಳಲ್ಲಿನ ಸಮಾಜದಲ್ಲಿ ಉದಾರವಾದ ಹೆಚ್ಚಿದೆ. ಯುರೋಪ್​ನ ಈ 'ಅಲ್ಟ್ರಾ-ಲಿಬರಲ್ ವ್ಯವಸ್ಥೆ'ಯನ್ನು ಬಳಸಿಕೊಂಡು ಖಲಿಸ್ತಾನಿ ಪ್ರತ್ಯೇಕತಾವಾದಿ ಚಳವಳಿಯನ್ನು ಮತ್ತಷ್ಟು ಉತ್ತೇಜಿಸಲು ಪಾಕಿಸ್ತಾನವು ಮುಂದಾಗಿದೆ.

1970 ರ ದಶಕದಲ್ಲಿ ಬರ್ಮಿಂಗ್​ ಹ್ಯಾಮ್​ನಲ್ಲಿ ಮೊದಲ ಬಾರಿ ಖಲಿಸ್ತಾನಿ ಧ್ವಜವನ್ನು ಹಾರಿಸಲಾಗಿತ್ತು. ಬಳಿಕ ಇದು ಯುರೋಪ್​ನ ಪ್ರತ್ಯೇಕತಾವಾದಿ ಚಳವಳಿಯ ಕೇಂದ್ರವಾಯಿತು. ಸಿಖ್​ರು ತಮಗಾಗಿ ಪ್ರತ್ಯೇಕ ರಾಜ್ಯ-ರಾಷ್ಟ್ರ ಬೇಕೆಂದು ಸರ್ಕಾರಗಳ ವಿರುದ್ಧ ಪ್ರತಿಭಟಿಸಲು ಕ್ರಾಂತಿಯ ಬೀಜಗಳನ್ನು ಬಿತ್ತುವ ಕೆಲಸವನ್ನು ಖಲಿಸ್ತಾನ್​ ಸಂಘಟನೆ ಮಾಡುತ್ತಾ ಬಂದಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಪ್ರತ್ಯೇಕತಾವಾದಿ ಚಳವಳಿಗೆ, ವಿಶೇಷವಾಗಿ ಸಿಖ್​ ಸಮುದಾಯದ ಜನರಲ್ಲಿ ಪ್ರತ್ಯೇಕತಾವಾದ ಬೆಳೆಸಲು ಪ್ರೋತ್ಸಾಹ ಹಾಗೂ ಧನಸಹಾಯ ನೀಡುತ್ತಾ ಬಂದಿದೆ ಎಂದು ಕೆನಡಾದ ಮೆಕ್​ ಡೊನಾಲ್ಡ್​-ಲೌರಿಯರ್ ಸಂಸ್ಥೆಯ 'ಖಲಿಸ್ತಾನ್: ಪಾಕಿಸ್ತಾನದ ಯೋಜನೆ' ಎಂಬ ಶೀರ್ಷಿಕೆಯ ವರದಿ ಹೇಳುತ್ತದೆ.

ಇದನ್ನೂ ಓದಿ: ಯುಎಸ್​ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ : ಭಾರತದಿಂದ ಖಂಡನೆ

ಯುರೋಪಿನ ಪ್ರಮುಖ ಭಾಗಗಳಲ್ಲಿ ಭಾರತ ವಿರೋಧಿ ಪ್ರತಿಭಟನೆಗಳನ್ನು ಸೃಷ್ಟಿಸಲು ಪಾಕಿಸ್ತಾನವು ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಗಳನ್ನು ಉತ್ತೇಜಿಸುತ್ತಿದೆ. ಜುಲೈನಲ್ಲಿ ಕೇಂದ್ರ ಗೃಹ ಸಚಿವಾಲಯವು ಖಲಿಸ್ತಾನಿ ಭಯೋತ್ಪಾದಕರು ಎಂದು ಗೊತ್ತುಪಡಿಸಿದ ಒಂಬತ್ತು ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಲಿಸ್ಟ್​ನಲ್ಲಿ ಭಾರತದ ಮೂವರ ಹೆಸರೂ ಇತ್ತು. ಭಾರತದಲ್ಲಿ ಅನೇಕ ಕಡೆಗಳಲ್ಲಿ ಖಲಿಸ್ತಾನ್​ ಪರ ಘೋಷಣೆಗಳು ಇದೀಗ ಹೆಚ್ಚಾಗಿ ಕೇಳಿಬರುತ್ತಿವೆ. ಕಾಶ್ಮೀರ ಮತ್ತು ಭಾರತದ ಇತರೆಡೆಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಾ ಅಶಾಂತಿಯ ಅಲೆಯನ್ನು ಬೀಸುತ್ತಿದೆ ಖಲಿಸ್ತಾನ್​ ಸಂಘಟನೆ.

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹಿನ್ನೆಲೆ ಸಿಖ್-ಅಮೆರಿಕನ್ ಯುವಕರು ಆಯೋಜಿಸಿದ್ದ ಪ್ರತಿಭಟನೆ ವೇಳೆ ಖಲಿಸ್ತಾನಿ ಸದಸ್ಯರು ಅಮೆರಿಕದ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ್ದಾರೆ. ಪ್ರತಿಭಟನಾಕಾರರ ಈ ವರ್ತನೆಯನ್ನು ಭಾರತೀಯ ರಾಯಭಾರಿ ಅಧಿಕಾರಿಗಳು ಖಂಡಿಸಿದ್ದು, ಘಟನೆ ಕುರಿತು ಅಮೆರಿಕದ ಕಾನೂನು ಜಾರಿ ಏಜೆನ್ಸಿಯಲ್ಲಿ ದೂರು ದಾಖಲಿಸಲಾಗಿದೆ.

ABOUT THE AUTHOR

...view details