ಕರ್ನಾಟಕ

karnataka

ETV Bharat / international

ರಾಜಕೀಯ ಕುಟಿಲಕ್ಕೆ ಕಾಶ್ಮೀರ ದುರ್ಬಳಕೆ: ಪಾಕ್ ಕಿವಿ ಹಿಂಡಿದ ಯುರೋಪ್, ಇಮ್ರಾನ್​ ಖಾನ್​ಗೆ ಮುಖಭಂಗ - ಪಾಕಿಸ್ತಾನದ ಕಾಶ್ಮೀರ ನೀತಿ

ಜಿನೀವಾದಲ್ಲಿ ಸೋಮವಾರ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 43ನೇ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಲಾಯಿತು. ಇದಾದ ಬಳಿಕ 'ಕಾಶ್ಮೀರ ಸಶಸ್ತ್ರೀಕರಣ: ರಾಜಕೀಯ ಅಜೆಂಡಾಕ್ಕಾಗಿ ಕಾಶ್ಮೀರ ದುರುಪಯೋಗ' ಎಂಬ ಕಾರ್ಯಕ್ರಮ ನಡೆಯಿತು.

European experts
ಯುರೋಪ್

By

Published : Mar 3, 2020, 9:20 PM IST

ಜಿನೀವಾ​: ದಶಕಗಳಿಂದ ಕಾಶ್ಮೀರವನ್ನು ರಾಜಕೀಯ ಕಾರ್ಯಸೂಚಿಗಾಗಿ ದುರುಪಯೋಗಪಡಿಸಿಕೊಂಡ ಪರಿಣಾಮ ಯುರೋಪಿಯನ್ ತಜ್ಞರು ಪಾಕಿಸ್ತಾನಕ್ಕೆ ಛೀಮಾರಿ ಹಾಕಿ, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಡೆಯನ್ನು ಬೆಂಬಲಿಸಿದ್ದಾರೆ.

ಯುರೋಪಿಯನ್ ಆಯೋಗದ ಮಾಜಿ ನಿರ್ದೇಶಕ ಬ್ರಿಯಾನ್ ಟೋಲ್ ಮಾತನಾಡಿ, 1947ರಲ್ಲಿ ವಿಭಜನೆ ಆದಾಗಿನಿಂದಲೂ ಪಾಕಿಸ್ತಾನವು ಜಮ್ಮುಕಾಶ್ಮೀರದೊಂದಿಗೆ ತೊಡಗಿಸಿಕೊಂಡಿದೆ. ಬುಡಕಟ್ಟು ಜನರ ಮತ್ತು ಜಮ್ಮುಕಾಶ್ಮೀರದ ನಿವಾಸಿಗಳಿಗೆ ಅಲ್ಲಿಯೇ ಆವಾಸ ಒದಗಿಸುವುದಕ್ಕಿಂತ ಹೆಚ್ಚಾಗಿ ಇಸ್ಲಾಮಾಬಾದ್ ನಿಗದಿಪಡಿಸಿದ ಕಾರ್ಯಸೂಚಿಗಳನ್ನು ಜಾರಿಗೆ ತರಲು ಕಣಿವೆ ರಾಜ್ಯವನ್ನು ಬಳಸಿಕೊಂಡಿದೆ ಎಂದು ಹೇಳಿದರು.

ಪಾಕಿಸ್ತಾನವು ಭಾರತದೊಂದಿಗೆ ಸಮಸ್ಯೆಗಳನ್ನು ಹೊಂದಿದೆ ಎಂಬುದು ಸ್ಪಷ್ಟ. ಪಾಕಿಸ್ತಾನವು ಒಂದೇ ರೀತಿಯ ವೈವಿಧ್ಯಮಯ ಸಂವಿಧಾನ ಮತ್ತು ವೈವಿಧ್ಯಮಯ ಜನಾಂಗ ಹೊಂದಿರುವಂತಹ ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಲ್ಲ. ಆದರೆ, ಭಾರತ ಅಂತಹ ರಾಷ್ಟ್ರ ಎಂಬುದಕ್ಕೆ ಹೆಮ್ಮೆಪಡುತ್ತಿದೆ ಎಂದರು.

ಅಲ್ಪಸಂಖ್ಯಾತರನ್ನು ಉತ್ತಮವಾಗಿ ನಡೆಸಿಕೊಂಡಿದೆ ಎಂಬುದನ್ನು ಭಾರತ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಉದಾಹರಣೆಗೆ, ಭಾರತ ಓರ್ವ ಮುಸ್ಲಿಂ ಸಮುದಾಯದವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಸುಪ್ರೀಂಕೋರ್ಟ್‌ನಂತಹ ಉನ್ನತ ಹುದ್ದೆಯಲ್ಲಿ ಮುಸ್ಲಿಂ ಮುಖ್ಯಸ್ಥರು ಇದ್ದಾರೆ. ಭಾರತ ಮಾದರಿಯ ಸೌಜನ್ಯವನ್ನು ತನ್ನ ಅಲ್ಪಸಂಖ್ಯಾತರಿಗೆ ಒದಗಿಸಲು ಪಾಕಿಸ್ತಾನ ಬಹಳ ಹಿಂಜರಿಯುತ್ತಿದೆ. ಪಾಕಿಸ್ತಾನದ ಗಡಿಗಳನ್ನು ಮತ್ತು ಅದರ ಪ್ರಭಾವವನ್ನು ವಿಸ್ತರಿಸಲು ಜಮ್ಮು ಕಾಶ್ಮೀರದಲ್ಲಿ ಸಮಸ್ಯೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.

ಪಾಕಿಸ್ತಾನದ ಆರ್ಥಿಕತೆಯು ತುಂಬಾ ಕಠಿಣ ಪರಿಸ್ಥಿತಿಯಲ್ಲಿದೆ. ಈ ದೇಶ ಸೌದಿ ಅರೇಬಿಯಾದ ಸಾಲದ ಮೇಲೆ ಬಹಳ ಅವಲಂಬಿತವಾಗಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಮೇಲೂ ಸಹ ಬಹಳ ಅವಲಂಬಿತರಾಗಿದ್ದಾರೆ ಎಂದರು.

ABOUT THE AUTHOR

...view details