ಕರ್ನಾಟಕ

karnataka

ETV Bharat / international

ಪಾತಕಿ ದಾವೂದ್​​ ಸೀಕ್ರೆಟ್​ ಬಹಿರಂಗಗೊಳ್ಳದಂತೆ ಪಾಕ್ ರಾಯಭಾರಿಗಳ ಎಲ್ಲಿಲ್ಲದ ಯತ್ನ!.. ಆಗುತ್ತಾ ಸಕ್ಸಸ್​​​? - undefined

ಲಂಡನ್​ನಲ್ಲಿ ಬಂಧಿತನಾಗಿರುವ ಡಿ ಕಂಪನಿಯ ಜಬೀರ್​ ಮೋತಿವಾಲನನ್ನು ಅಮೆರಿಕಗೆ ಹಸ್ತಾಂತರಿಸಬೇಕೆಂಬ ಯುಎಸ್​ ಫೆಡರಲ್ ಬ್ಯೂರೋ ಆಫ್​ ಇನ್​ವೆಸ್ಟಿಗೇಷನ್​ನ ಮನವಿ ಬಗ್ಗೆ ನಿನ್ನೆ ವೆಸ್ಟ್​ಮಿನ್​​ಸ್ಟರ್​ ಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. ಕಂಪನಿಯ ವಕೀಲರೊಂದಿಗೆ, ಪಾಕಿಸ್ತಾನಿ ರಾಯಭಾರಿಗಳು ಹಾಜರಿದ್ದು, ಮೋತಿವಾಲಾ ಖಿನ್ನತೆಯಿಂದ ಬಳಲುತ್ತಿರುವ ಕಾರಣ ಅಮೆರಿಕಗೆ ಪ್ರಯಾಣಿಸಲಾಗದು ಎಂದು ವಾದಿಸಿದ್ದಾರೆ.

ದಾವೂದ್ ಇಬ್ರಾಹಿಂ-ಜಬೀರ್​ ಮೋತಿವಾಲ

By

Published : Jul 2, 2019, 2:00 PM IST

ಲಂಡನ್:​ ಭೂಗತದೊರೆ ದಾವೂದ್ ಇಬ್ರಾಹಿಂನ ಡಿ-ಕಂಪನಿಯ ಪ್ರಮುಖನನ್ನು ಅಮೆರಿಕಗೆ ಹಸ್ತಾಂತರ ಮಾಡುವುದನ್ನು ತಡೆಯಲು ಲಂಡನ್​ನಲ್ಲಿರುವ ಪಾಕಿಸ್ತಾನಿ ರಾಯಭಾರಿಗಳು ಸಕಲ ಪ್ರಯತ್ನ ನಡೆಸುತ್ತಿದ್ದಾರೆ.

ಲಂಡನ್​ನಲ್ಲಿ ಬಂಧಿತನಾಗಿರುವ ಡಿ ಕಂಪನಿಯ ಜಬೀರ್​ ಮೋತಿವಾಲನನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕೆಂಬ ಯುಎಸ್​ ಫೆಡರಲ್ ಬ್ಯೂರೋ ಆಫ್​ ಇನ್​ವೆಸ್ಟಿಗೇಷನ್​ನ ಮನವಿ ಬಗ್ಗೆ ನಿನ್ನೆ ವೆಸ್ಟ್​ಮಿನ್​​​ಸ್ಟರ್​ ಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. ಕಂಪನಿಯ ವಕೀಲರೊಂದಿಗೆ, ಪಾಕಿಸ್ತಾನಿ ರಾಯಭಾರಿಗಳು ಹಾಜರಿದ್ದು, ಮೋತಿವಾಲಾ ಖಿನ್ನತೆಯಿಂದ ಬಳಲುತ್ತಿರುವ ಕಾರಣ ಅಮೆರಿಕಕ್ಕೆ ಪ್ರಯಾಣಿಸಲಾಗದು ಎಂದು ವಾದಿಸಿದ್ದಾರೆ.

ದಾವೂದ್​ ಆಪ್ತನಾಗಿರುವ ಮೋತಿವಾಲನನ್ನು 2018 ಆಗಸ್ಟ್​ನಲ್ಲಿ ಬಂಧಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ, ಡ್ರಗ್ ಕಳ್ಳಸಾಗಣೆ, ಭೂಗತ ಅಪರಾಧಗಳ ಪ್ರಕರಣ ಸಂಬಂಧ ಮೋತಿವಾಲಾನ ವಿಚಾರಣೆ ಅಗತ್ಯವೆಂದು ಅಮೆರಿಕ ಮನವಿ ಮಾಡಿತ್ತು. ಈತನು ಪಾಕಿಸ್ತಾನದಲ್ಲಿ ಚಿರಪರಿಚಿತ ಉದ್ಯಮಿಯಾಗಿದ್ದಾನೆ ಎಂದು ಪಾಕ್ ರಾಯಭಾರಿಗಳು ಹೇಳಿಕೊಂಡಿದ್ದಾರೆ.

ಒಂದು ವೇಳೆ ಈತನನ್ನು ಅಮೆರಿಕಕ್ಕೆ ಹಸ್ತಾಂತರ ಮಾಡಿದರೆ, ದಾವೂದ್​ನ ಭೂಗತ ಚಟುವಟಿಕೆಗಳು, ಪಾಕಿಸ್ತಾನದ ಗುಪ್ತಚರದೊಂದಿಗೆ ಆತನ ಸಂಬಂಧ ಎಲ್ಲವೂ ಬಯಲಾಗುತ್ತೆ ಎಂಬುದು ರಾಯಭಾರಿಗಳ ಆತಂಕವಾಗಿದೆ. ಇದೇ ಕಾರಣಕ್ಕೆ ಮೋತಿವಾಲನನ್ನು ಅಮೆರಿಕಕ್ಕೆ ಹಸ್ತಾಂತರ ಮಾಡಬಾರದು ಎಂದು ಅವರು ಎಲ್ಲಿಲ್ಲದ ಶ್ರಮ ವಹಿಸುತ್ತಿದ್ದಾರೆ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details