ಲಂಡನ್:ಭಾರತೀಯ ದೂತವಾಸ ಕಚೇರಿಯ ಭದ್ರತೆ ಬಗ್ಗೆ ದನಿ ಎತ್ತಿದ ಕೆಲ ದಿನದಲ್ಲೇ ಲಂಡನ್ನಲ್ಲಿರುವ ಭಾರತೀಯ ದೂತವಾಸದ ಕಚೇರಿ ಮೇಲೆ ಪಾಕಿಸ್ತಾನಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ.
ಆಗಸ್ಟ್ 15ರಂದು ಲಂಡನ್ನಲ್ಲಿರುವ ಭಾರತೀಯ ದೂತವಾಸ ಕಚೇರಿ ಹೊರಭಾಗದಲ್ಲಿ ಪಾಕ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಮಂಗಳವಾರದಂದು ಪಾಕಿಸ್ತಾನಿ ಬೆಂಬಲಿಗರು ಭಾರತೀಯ ಹೈಕಮಿಷನ್ ಕಚೇರಿ ಹೊರಗಡೆ ಪ್ರತಿಭಟನೆ ನಡೆಸಿ ಕಲ್ಲು ತೂರಿದ್ದಾರೆ ಎಂದು ಲಂಡನ್ನ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ. ಕಚೇರಿಗೆ ಹಾನಿಯಾಗಿದೆ ಎಂದು ಫೋಟೋ ಸಹಿತ ಟ್ವೀಟ್ ಮಾಡಿ ಉಲ್ಲೇಖಿಸಿದೆ.