ಲಂಡನ್: ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಿರುದ್ಧ ಹೋರಾಡುವ ಹೊಸ ಭರವಸೆಯನ್ನು ಹುಟ್ಟುಹಾಕುತ್ತಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು, ಕೇವಲ ಆರು ವಾರಗಳಲ್ಲಿ ಸಿದ್ಧವಾಗಬಹುದಾದ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ ಎಂದು ಯುಕೆ ಮೂಲದ ಮಾಧ್ಯಮ ವರದಿ ಮಾಡಿದೆ.
"ಆರು ವಾರಗಳಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಮುಂದಾಗುತ್ತಿದ್ದೇವೆ. ಆಶಾದಾಯಕವಾಗಿ ಈ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಹೋರಾಡಲು ಜಗತ್ತಿಗೆ ಸಹಕಾರಿಯಾಗಲಿದೆ" ಎಂದು ವರದಿ ಮಾಡಲಾಗಿದೆ.
ಇನ್ನು ಬ್ರಿಟನ್ನಲ್ಲಿ ಚಳಿಗಾಲದ ಸಂದರ್ಭದಲ್ಲಿ ಉಂಟಾಗುವ ಭೀಕರತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಸೂಚನೆಯನ್ನು ಹಿಂದೆಯೇ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಈ ಸಂಶೋಧನೆಗೆ ಮುಂದಾಗುತ್ತಿದ್ದು, 6 ವಾರಗಳಲ್ಲಿ ಲಸಿಕೆ ಅಭಿವೃದ್ಧಿಯಾಗುವ ಭರವಸೆಯಿದೆ ಎನ್ನಲಾಗಿದೆ.