ಲಂಡನ್(ಯುಕೆ) : ಅಮೆರಿಕದಲ್ಲಿ ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ವರ್ಣಬೇಧ ನೀತಿಯ ವಿರುದ್ಧ ಹುಟ್ಟಿಕೊಂಡ ಹೋರಾಟ ಇದೀಗ ಬ್ರಿಟನ್ಗೂ ವ್ಯಾಪಿಸಿದೆ. ಸಾಮ್ರಾಜ್ಯಶಾಹಿ ಪ್ರತಿಮೆ ತೆಗೆದು ಹಾಕಬೇಕೆಂದು ಆಕ್ಸ್‌ಫರ್ಡ್‌ನ ಓರಿಯಲ್ ಕಾಲೇಜಿನಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.
ಯುಎಸ್ನ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನದಿಂದ ಪ್ರೇರೇಪಿತಗೊಂಡ ಯುವ ವಿದ್ಯಾರ್ಥಿಗಳು ಆಕ್ಸ್‌ಫರ್ಡ್‌ನ ಓರಿಯಲ್ ಕಾಲೇಜಿನಲ್ಲಿ ಕಲ್ಲಿನಿಂದ ಕೆತ್ತಿರುವ ಸಾಮ್ರಾಜ್ಯಶಾಹಿ ವಿಕ್ಟೋರಿಯನ್ ಸೆಸಿಲ್ ರೋಡ್ಸ್ನ ಪ್ರತಿಮೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಆಕ್ಸ್‌ಫರ್ಡ್‌ನ ಓರಿಯಲ್ ಕಾಲೇಜಿನ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ ಈ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಟಿಷ್ ಇತಿಹಾಸಕಾರ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೀಟರ್ ಫ್ರಾಂಕೋಪನ್, ಐತಿಹಾಸಿಕ ವ್ಯಕ್ತಿಗಳ ಪ್ರತಿಮೆಯನ್ನು ತೆರವುಗೊಳಿಸುವಾಗ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಬ್ರಿಟನ್ ಇತರ ದೇಶಗಳಿಂದ ಪಡೆದ ಸಂಪತ್ತಿನ ಮೇಲೆ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕಾರರು ಲಂಡನ್ನ ಡಾಕ್ಲ್ಯಾಂಡ್ನಲ್ಲಿದ್ದ 18 ನೇ ಶತಮಾನದ ಗುಲಾಮ ಮಾಲೀಕ ರಾಬರ್ಟ್ ಮಿಲ್ಲಿಗನ್ ಪ್ರತಿಮೆಯನ್ನು ಮಂಗಳವಾರ ತೆರವುಗೊಳಿಸಿದ್ದರು. ಪ್ರತಿಭಟನಾಕಾರರು ಇನ್ನೂ ಹೆಚ್ಚಿನ ಸಾಮ್ರಾಜ್ಯಶಾಹಿಗಳ ಪ್ರತಿಮೆಗಳನ್ನು ಬ್ರಿಟನ್ನ ಬೀದಿಗಳಿಂದ ತೆಗೆದು ಹಾಕಬಹುದು ಎಂದು ಲಂಡನ್ ಮೇಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.