ಜಿನೀವಾ (ಸ್ವಿಟ್ಜರ್ಲೆಂಡ್): ಜಗತ್ತಿನಾದ್ಯಂತ ಕೋವಿಡ್ ಪ್ರಕರಣಗಳ ಹೆಚ್ಚಾಗುತ್ತಿರುವ ಬೆನ್ನಲ್ಲೇ ಹೊಸ ರೂಪಾಂತರಿ ಒಮಿಕ್ರಾನ್ ಅಪಾಯವೂ ಅತಿ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಡಬ್ಲ್ಯೂಹೆಚ್‌ಒನ ಸಾಪ್ತಾಹಿಕ ಎಪಿಡೆಮಿಯೊಲಾಜಿಕಲ್ ಡಿಸೆಂಬರ್ 20 ರಿಂದ 26ರ 1 ವಾರದ ಕೋವಿಡ್ ಅಂಕಿ - ಅಂಶಗಳನ್ನು ಬಹಿರಂಗಪಡಿಸಿದ್ದು, ಹಿಂದಿನ ವಾರಕ್ಕೆ ಹೋಲಿಸಿದರೆ ಜಾಗತಿಕ ಕೋವಿಡ್ ಪ್ರಕರಣಗಳು ಶೇ.11 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.
ಒಮಿಕ್ರಾನ್ 2-3 ದಿನಗಳಲ್ಲಿ ದ್ವಿಗುಣಗೊಳ್ಳುವ ಮೂಲಕ ಡೆಲ್ಟಾಗಿಂತ ವೇಗವನ್ನು ಹೊಂದಿರುವ ಬಗ್ಗೆ ಸ್ಥಿರವಾದ ಪುರಾವೆಗಳು ಹೇಳುತ್ತಿವೆ. ಇದರ ಬೆನ್ನಲ್ಲೇ ಹಲವಾರು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ರೂಪಾಂತರಿ ಪ್ರಬಲವಾದ ಮಾರ್ಪಟ್ಟಿದೆ. ಇದಕ್ಕೆ ಯುಕೆ, ಯುಎಸ್ ಉದಾಹರಣೆ ಎಂದು ತಿಳಿಸಿದೆ.