ವೆಲ್ಲಿಂಗ್ಟನ್:ಇಂದು ಬೆಳಗ್ಗೆ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಟಿವಿ ಮಾಧ್ಯಮದ ಲೈವ್ ಸಂದರ್ಶನದಲ್ಲಿ ಭಾಗವಹಿಸಿದ್ದಾಗ ಭೂಕಂಪ ಸಂಭವಿಸಿದೆ.
ನ್ಯೂಜಿಲ್ಯಾಂಡ್ ಪ್ರಧಾನಿ ಟಿವಿ ಸಂದರ್ಶನದಲ್ಲಿದ್ದಾಗ ಭೂಕಂಪ.. ಜಸಿಂದಾ ಪ್ರತಿಕ್ರಿಯೆ ಹೀಗಿತ್ತು! ವಿಡಿಯೋ - ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್
ನ್ಯೂಜಿಲ್ಯಾಂಡ್ ಪ್ರಧಾನಿ ಪ್ರಧಾನಿ ಜಸಿಂದಾ ಅರ್ಡೆರ್ನ್, ಟಿವಿ ಮಾಧ್ಯಮದ ಲೈವ್ ಸಂದರ್ಶನದಲ್ಲಿ ಭಾಗವಹಿಸಿದ್ದಾಗ ಭೂಕಂಪ ಸಂಭವಿಸಿದೆ. ಇದರಿಂದ ವಿಚಲಿತರಾಗದ ಅವರು ನಗುತ್ತಲೆ ತಮ್ಮ ಮಾತು ಮುಂದುವರೆಸಿದ್ದಾರೆ.
ನ್ಯೂಜಿಲ್ಯಾಂಡ್ ಪ್ರಧಾನಿ ಟಿವಿ ಸಂದರ್ಶನದಲ್ಲಿದ್ದಾಗ ಭೂಕಂಪ
ಲೈವ್ ಸಂದರ್ಶನದಲ್ಲಿ ಮಾತನಾಡುತ್ತಿರುವಾಗ ಕೆಲ ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ. ಈ ವೇಳೆ ನಗುತ್ತಲೇ ಮಾತನಾಡಿದ ಅವರು, ಸ್ವಲ್ಪ ಭೂಮಿ ಕಂಪಿಸಿದ ಅನುಭವವಾಗುತ್ತಿದೆ. ನನ್ನ ಹಿಂದಿನ ವಸ್ತುಗಳು ಅಲುಗಾಡಿದ್ದನ್ನು ನೀವು ಗಮನಿಸಿದಿರಾ? ಎಂದಿದ್ದಾರೆ.
ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ವೆಲ್ಲಿಂಗ್ಟನ್‌ನಿಂದ ಈಶಾನ್ಯ ಭಾಗಕ್ಕೆ 100 ಕಿಲೋ ಮೀಟರ್ ದೂರದಲ್ಲಿರುವ ಸಾಗರದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.