ಕರ್ನಾಟಕ

karnataka

ETV Bharat / international

ಚಾಲಕ ರಹಿತ ವಾಹನ ಕೇಳಿದ್ರಿ..  ಈಗ ಪೈಲಟ್​ ರಹಿತ ವಿಮಾನದ ಸರದಿ..! - ಫ್ರಾನ್ಸ್

ಏರ್​ಬಸ್​​​ 2035ರ ವೇಳೆಗೆ ಹೈಬ್ರಿಡ್​ ಅಥವಾ ಎಲೆಕ್ಟ್ರಿಕ ಪ್ಯಾಸೆಂಜರ್​​ ಜೆಟ್​ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಾಗಿದೆ. ಇದೇ ವೇಳೆ, ಏರ್​ಬಸ್​ ಚಾಲಕ ರಹಿತ( ಸ್ವಯಂ ಹಾರಾಟ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸನ್ನದ್ಧವಾಗಿದೆ.

Airbus

By

Published : Jun 18, 2019, 2:12 PM IST

ಪ್ಯಾರಿಸ್​:ಫ್ರಾನ್ಸ್​ನಲ್ಲಿ ಅತಿ ದೊಡ್ಡ ಏರ್​ಶೋ ನಡೆಯುತ್ತಿದೆ. ವಿಶ್ವದ ಪ್ರಮುಖ ವಿಮಾನ ತಯಾರಿಕಾ ಕಂಪನಿಗಳು ಈ ಶೋನಲ್ಲಿ ಪಾಲ್ಗೊಂಡಿವೆ. ವಿಶ್ವ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ, ವಿಶ್ವ ವ್ಯಾಪಾರ ಯುದ್ಧ ಹಾಗೂ ಭಯೋತ್ಪಾದನೆಯ ಕರಿನೆರಳಿನ ಭೀತಿ ನಡುವೆ, ಹೊಸ ಹುರುಪಿನೊಂದಿಗೆ ವಿಮಾನ ತಯಾರಿಕ ಕಂಪನಿಗಳು ಶೋ ನಲ್ಲಿ ಭಾಗಿಯಾಗಿವೆ.

ಇದೇ ಮಹದಾಸೆಯೊಂದಿಗೆ ಏರ್​ಬಸ್​ ಶೋ ನಲ್ಲಿ ಪಾಲ್ಗೊಂಡಿದೆ. ಇನ್ನೊಂದೆಡೆ ಏರ್​ಬಸ್​ನ ಪ್ರತಿಸ್ಪರ್ಧಿ ಬೋಯಿಂಗ್​ ಸಹ ಸಂಕಷ್ಟದಲ್ಲಿದೆ. ಈ ನಡುವೆ ಶೋನಲ್ಲಿ ವಿದ್ಯುತ್​ ಚಾಲಿತ ಹಾಗೂ ಪೈಲಟ್​ ರಹಿತ ವಿಮಾನಗಳನ್ನ ಪ್ರದರ್ಶಿಸಲಾಯಿತು.

ಏರ್​ಬಸ್​​​ 2035ರ ವೇಳೆಗೆ ಹೈಬ್ರಿಡ್​ ಅಥವಾ ಎಲೆಕ್ಟ್ರಿಕ ಪ್ಯಾಸೆಂಜರ್​​ ಜೆಟ್​ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಾಗಿದೆ ಎಂದು ಅದರ ಸಿಇಒ ಹೇಳಿದ್ದಾರೆ. ಇದೇ ವೇಳೆ, ಏರ್​ಬಸ್​ ಚಾಲಕ ರಹಿತ( ಸ್ವಯಂ ಹಾರಾಟ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸನ್ನದ್ಧವಾಗಿದೆ. ಅಷ್ಟೇ ಅಲ್ಲ ಒಬ್ಬ ಪೈಲಟ್​ ಜೊತೆ ಹಾರಾಟಕ್ಕೂ ಸಿದ್ಧವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ABOUT THE AUTHOR

...view details