ಕರ್ನಾಟಕ

karnataka

ETV Bharat / international

ಕವಯತ್ರಿ ಲೂಯಿಸ್​ ಗ್ಲಿಕ್​ಗೆ 2020 ರ ಸಾಹಿತ್ಯ ನೊಬೆಲ್ ಗರಿ

ಸಾಹಿತ್ಯ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ಕವಯತ್ರಿ ಲೂಯಿಸ್ ಗ್ಲಿಕ್​ ಅವರನ್ನು 2020 ರ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Nobel Prize for Literature
ಕವಯಿತ್ರಿ ಲೂಯಿಸ್​ ಗ್ಲಕ್​ಗೆ ನೊಬೆಲ್ ಪ್ರಶಸ್ತಿ

By

Published : Oct 8, 2020, 5:01 PM IST

Updated : Oct 8, 2020, 5:52 PM IST

ಸ್ಟಾಕ್ಹೋಮ್ : ಸಾಹಿತ್ಯ ಕ್ಷೇತ್ರದ 2020 ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಅಮೆರಿಕದ ಕವಯತ್ರಿ ಲೂಯಿಸ್​ ಗ್ಲಿಕ್​ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ನೊಬೆಲ್ ಒಲಿದು ಬಂದಿದೆ.

ಸಾಹಿತ್ಯ ಕ್ಷೇತ್ರದ ನೊಬೆಲ್ ವಿಜೇತರನ್ನು ಆಯ್ಕೆ ಮಾಡುವ ಸ್ವೀಡಿಶ್‌​ ಅಕಾಡೆಮಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಹಿನ್ನೆಲೆ 2018 ರ ಪ್ರಶಸ್ತಿಯನ್ನು ಮುಂದೂಡಲಾಗಿತ್ತು ಮತ್ತು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದರು.

ಸ್ವೀಡಿಶ್​ ಅಕಾಡೆಮಿ ಮತ್ತೊಮ್ಮೆ ನೊಬೆಲ್ ಫೌಂಡೇಶನ್‌ನ ವಿಶ್ವಾಸವನ್ನು ಮರಳಿ ಪಡೆದ ಬಳಿಕ, ಕಳೆದ ವರ್ಷ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. 2018 ರ ಪ್ರಶಸ್ತಿ ಪೋಲೆಂಡ್‌ನ ಓಲ್ಗಾ ಟೋಕಾರ್ಕ್‌ಜುಕ್‌ಗೆ ಮತ್ತು 2019 ರ ಪ್ರಶಸ್ತಿ ಆಸ್ಟ್ರಿಯಾದ ಪೀಟರ್ ಹ್ಯಾಂಡ್ಕೆಗೆ ನೀಡಲಾಗಿದೆ.

Last Updated : Oct 8, 2020, 5:52 PM IST

ABOUT THE AUTHOR

...view details