ಓಸ್ಲೋ :2021ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಪತ್ರಕರ್ತರಾದ ಮರಿಯಾ ರೆಸ್ಸಾ & ಡಿಮಿಟ್ರಿ ಮುರಾಟೋವ್ಗೆ ಅವರಿಗೆ ಜಂಟಿಯಾಗಿ ಈ ಸಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನ ಘೋಷಿಸಲಾಗಿದೆ.
2021ನೇ ಸಾಲಿನ ಸಾಹಿತ್ಯ, ರಸಾಯನಶಾಸ್ತ್ರ,ಭೌತಶಾಸ್ತ್ರ ಹಾಗೂ ಮೆಡಿಸಿನ್ ವಿಭಾಗದಲ್ಲಿ ಈಗಾಗಲೇ ಪ್ರತಿಷ್ಠಿತ ನೊಬೆಲ್ ಘೋಷಿಸಲಾಗಿದೆ. ಇಂದು ಶಾಂತಿ ವಿಭಾಗದಲ್ಲೂ ಪ್ರಶಸ್ತಿ ಘೋಷಣೆಯಾಗಿದೆ.
ಇದನ್ನೂ ಓದಿರಿ:ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಕಟ: ಕಾದಂಬರಿಕಾರ ಅಬ್ದುಲ್ರಜಾಕ್ ಗುರ್ನಾಹ್ಗೆ ಪ್ರಶಸ್ತಿ
ಫಿಲಿಪೈನ್ಸ್ನ ಮಾರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್ ಅವರಿಗೆ ತಮ್ಮ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ. ನಾರ್ವೇಜಿಯನ್ ನೊಬೆಲ್ ಸಮಿತಿಯ ಅಧ್ಯಕ್ಷೆ ಬೆರಿಟ್ ರೀಸ್ ಅಂಡರ್ಸನ್ ಈ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.
ನೊಬೆಲ್ ಪ್ರಶಸ್ತಿಯು 10 ಮಿಲಿಯನ್ ಸ್ವೀಡಿಷ್ ಕ್ರೋನ್ (121.12 ಮಿಲಿಯನ್) ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 8 ಕೋಟಿ ರೂ. ಪ್ರಶಸ್ತಿ ಮೊತ್ತ ಹೊಂದಿದೆ. (8,52,19,020 ರೂ. )