ಕರ್ನಾಟಕ

karnataka

ETV Bharat / international

'ಯುದ್ಧ ಬೇಡ..' ರಷ್ಯಾ ವಾಹಿನಿಯೊಂದರ ನೇರಪ್ರಸಾರದಲ್ಲೇ ಸಿಬ್ಬಂದಿ ರಾಜೀನಾಮೆ

ಯುದ್ಧ ಬೇಡ ಎಂದು ಟಿವಿ ಕಾರ್ಯಕ್ರಮದ ಕೊನೆಯಲ್ಲಿ ವಾಹಿನಿಯ ಎಲ್ಲಾ ಸಿಬ್ಬಂದಿ ನೇರಪ್ರಸಾರದಲ್ಲೇ ರಾಜೀನಾಮೆ ಸಲ್ಲಿಸಿ ಹೊರಬಂದಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

No To War: Entire Staff Of Russian TV Channel Resigns Live On-Air
'ಯುದ್ಧ ಬೇಡ' ಎಂದೇಳಿ ರಷ್ಯಾ ಟಿವಿಯ ಎಲ್ಲಾ ಸಿಬ್ಬಂದಿ ಲೈವ್‌ನಲ್ಲೇ ರಾಜೀನಾಮೆ...!

By

Published : Mar 4, 2022, 5:58 PM IST

ಮಾಸ್ಕೋ: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ದಾಳಿಯನ್ನು ವಿರೋಧಿಸಿ ರೈನ್‌ ಎಂಬ ವಾಹಿನಿಯ ಎಲ್ಲಾ ಸಿಬ್ಬಂದಿ ಕಾರ್ಯಕ್ರಮವೊಂದರ ಕೊನೆಯಲ್ಲಿ ನೇರಪ್ರಸಾರದಲ್ಲೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಉಕ್ರೇನ್ ಯುದ್ಧದ ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದ ಈ ಸುದ್ದಿವಾಹಿನಿಯ ಕಾರ್ಯಾಚರಣೆಯನ್ನು ರಷ್ಯಾ ಅಧಿಕಾರಿಗಳು ಸ್ಥಗಿತಗೊಳಿಸಿದ ನಂತರ ವಾಹಿನಿಯ ಸಿಬ್ಬಂದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ವಾಹಿನಿಯ ಸಂಸ್ಥಾಪಕರಲ್ಲಿ ಒಬ್ಬರಾದ ನಟಾಲಿಯಾ ಸಿಂಡೆಯೆವಾ ಹಾಗು ಉದ್ಯೋಗಿಗಳು ಸ್ಟುಡಿಯೋದಿಂದ ಹೊರನಡೆಯುತ್ತಿರುವಾಗ ಕೊನೆಯ ಪ್ರಸಾರದಲ್ಲಿ ಯುದ್ಧ ಬೇಡ ಎಂದು ಹೇಳಿ ಹೋಗಿದ್ದಾರೆ.

ಈ ಘಟನೆಯ ಕುರಿತ ವಿಡಿಯೋವನ್ನು ಬರಹಗಾರ ಡೇನಿಯಲ್ ಅಬ್ರಹಾಮ್ಸ್ ಎಂಬವರು ಲಿಂಕ್ಡ್‌ ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಉಕ್ರೇನ್​ನಲ್ಲಿ ಸಮರ: ಆಶ್ರಯ ತಾಣವಾಗಿರುವ ಬಂಕರ್​​ ಬಗ್ಗೆ ಮಾಹಿತಿ ನೀಡಿದ ಭಾರತೀಯ ವಿದ್ಯಾರ್ಥಿ

ABOUT THE AUTHOR

...view details