ಕರ್ನಾಟಕ

karnataka

ETV Bharat / international

ಸಾಕ್ಷಿದಾರನಿಗೆ ಕೊಲೆ ಬೆದರಿಕೆ,ಲಂಚದ ಆಮಿಷ... ನೀರವ್ ಮೋದಿ ಜಾಮೀನು ಅರ್ಜಿ ವಿಚಾರಣೆಯಲ್ಲಿ ಏನೇನಾಯ್ತು..? - ನೀರವ್ ಮೋದಿ

ಇಂದು ಎರಡನೇ ಜಾಮೀನು ಅರ್ಜಿ ವಿಚಾರಣೆಯನ್ನು ವೆಸ್ಟ್​ಮಿನಿಸ್ಟರ್ ಕೋರ್ಟ್​ ಕೈಗೆತ್ತಿಕೊಂಡಿತ್ತು. ಭಾರತದ ಅಧಿಕಾರಗಳ ಪರವಾಗಿ ವಾದ ಮಂಡಿಸಿದ್ದ ಲಾಯರ್​​, ನೀರವ್ ಮೋದಿ ಸಾಕ್ಷಿದಾರರಿಗೆ ಕೊಲೆ ಬೆದರಿಕೆ ಹಾಗೂ 20 ಲಕ್ಷ ಲಂಚದ ಆಮಿಷ ಒಡ್ಡಿದ್ದಾನೆ ಎಂದು ಕೋರ್ಟ್​ ಮುಂದೆ ಹೇಳಿದ್ದಾರೆ.

ನೀರವ್ ಮೋದಿ

By

Published : Mar 29, 2019, 10:15 PM IST

ಲಂಡನ್​: ಸ್ಕಾಟ್ಲೆಂಡ್ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬಹುಕೋಟಿ ವಂಚಕ ನೀರವ್ ಮೋದಿ ಜಾಮೀನು ಅರ್ಜಿ ಮತ್ತೆ ವಜಾ ಆಗಿದ್ದು, ಇಂದಿನ ವಾದ-ವಿವಾದದಲ್ಲಿ ಆಗಿದ್ದೇನು ಎನ್ನುವ ಮಾಹಿತಿ ಇಲ್ಲಿದೆ.

ಲಂಡನ್​ ಸಮಯ ಹನ್ನೊಂದು ಗಂಟೆಗೆ ನೀರವ್ ಮೋದಿ ಎರಡನೇ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಯಿತು. ಪ್ರಮುಖ ವಾಗಿ ನೀರವ್ ಮೋದಿ ಸಾಕ್ಷ್ಯ ನಾಶ, ಸಾಕ್ಷಿದಾರನಿಗೆ ಕೊಲೆ ಬೆದರಿಕೆ, ಲಂಚದ ಆರೋಪ, ಭಾರತದ ಸಾಕ್ಷ್ಯಗಳು ಅಸಮಂಜಸ ಎನ್ನುವ ವಿಚಾರಗಳೇ ಅರ್ಜಿ ವಿಚಾರಣೆಯ ಪ್ರಮುಖ ಹೈಲೈಟ್ಸ್​..!

ಮಾರ್ಚ್​ 20ರಂದು ಬ್ಯಾಂಕ್ ಖಾತೆ ತೆರೆಯುವ ಸಂದರ್ಭದಲ್ಲಿ ಸ್ಕಾಟ್ಲೆಂಡ್ ಪೊಲೀಸರು ನೀರವ್ ಮೋದಿಗೆ ಕೋಳ ತೊಡಿಸಿದ್ದರು. ತಕ್ಷಣವೇ ಜಾಮೀನು ಅರ್ಜಿ ಸಲ್ಲಿಸಲಾಗಿತ್ತಾದರೂ, ವೆಸ್ಟ್​ಮಿನಿಸ್ಟರ್​ ಕೋರ್ಟ್​ ಅರ್ಜಿಯನ್ನು ತಳ್ಳಿಹಾಕಿತ್ತು. ಹೀಗಾಗಿ ಮಾರ್ಚ್​ 29ರವರೆಗೆ ಜೈಲಿನಲ್ಲೇ ನೀರವ್ ಮೋದಿ ಕಾಲ ಕಳೆದಿದ್ದರು.

ಇಂದು ಎರಡನೇ ಜಾಮೀನು ಅರ್ಜಿ ವಿಚಾರಣೆಯನ್ನು ವೆಸ್ಟ್​ಮಿನಿಸ್ಟರ್ ಕೋರ್ಟ್​ ಕೈಗೆತ್ತಿಕೊಂಡಿತ್ತು. ಭಾರತದ ಅಧಿಕಾರಗಳ ಪರವಾಗಿ ವಾದ ಮಂಡಿಸಿದ್ದ ಲಾಯರ್​​, ನೀರವ್ ಮೋದಿ ಸಾಕ್ಷಿದಾರರಿಗೆ ಕೊಲೆ ಬೆದರಿಕೆ ಹಾಗೂ 20 ಲಕ್ಷ ಲಂಚದ ಆಮಿಷ ಒಡ್ಡಿದ್ದಾನೆ ಎಂದು ಕೋರ್ಟ್​ ಮುಂದೆ ಹೇಳಿದ್ದಾರೆ.

ವಿಚಾರಣೆ ಆರಂಭಕ್ಕೂ ಮುನ್ನ ಭಾರತದ ಮತ್ತಷ್ಟು ದಾಖಲೆಯನ್ನು ಕೋರ್ಟ್​ಗೆ ಸಲ್ಲಿಸಲಾಗಿತ್ತು. ಚೀಫ್ ಮ್ಯಾಜಿಸ್ಟ್ರೇಟ್​ ಈ ದಾಖಲೆ ಅಸಮಂಜಸವಾಗಿದೆ ಮತ್ತು ಪರಿಪೂರ್ಣವಾಗಿಲ್ಲ ಎಂದು ಹೇಳಿದ್ದಾರೆ.

ಸಾಕ್ಷ್ಯನಾಶದ ಸಾಧ್ಯತೆಯನ್ನು ಭಾರತದ ಪರ ಲಾಯರ್ ವ್ಯಕ್ತಪಡಿಸಿರುವುದನ್ನು ನ್ಯಾಯಾಲಯ ಪರಿಗಣಿಸಿದ್ದು ಈ ನಿಟ್ಟಿನಲ್ಲಿ ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕೃತಗೊಳಿಸಿದೆ. ಮುಂದಿನ ವಿಚಾರಣೆಯನ್ನು ಎಪ್ರಿಲ್ 26ಕ್ಕೆ ಮುಂದೂಡಿಕೆ ಮಾಡಿದೆ.

ABOUT THE AUTHOR

...view details