ಸ್ಟಾಕ್‌ಹೋಮ್: ಸ್ವೀಡನ್‌ನ ಒರೆಬ್ರೊ ಪ್ರದೇಶದ ಹೊರವಲಯದಲ್ಲಿ ವಿಮಾನ ಅಪಘಾತವಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆಂದು ಸ್ವೀಡಿಷ್ ಪೊಲೀಸರು ತಿಳಿಸಿದ್ದಾರೆ. ‘ಇದು ತುಂಬಾ ಆಘಾತಕಾರಿ ವಿಚಾರ’ ಎಂದು ಸ್ವೀಡಿಷ್ ಪೊಲೀಸರು ತಮ್ಮ ವೆಬ್ಸೈಟ್ನಲ್ಲಿ ತಿಳಿಸಿದ್ದಾರೆ.
ಡಿಎಚ್‌ಸಿ -2 ಟರ್ಬೊ ಬೀವರ್ ಎಂಬ ವಿಮಾನದಲ್ಲಿ ಎಂಟು ಸ್ಕೈ ಡೈವರ್‌ಗಳು ಮತ್ತು ಒಬ್ಬ ಪೈಲಟ್ ಪ್ರಯಾಣಿಸುತ್ತಿದ್ದರು. ಟೇಕ್‌ಆಫ್ ಆದ ಸ್ವಲ್ಪ ಸಮಯದ ನಂತರ ಒರೆಬ್ರೊ ವಿಮಾನ ನಿಲ್ದಾಣದ ಬಳಿ ಫ್ಲೈಟ್ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು ಹೊತ್ತಿ ಉರಿದಿದೆ. ಈ ಸಮಯದಲ್ಲಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.