ಲಂಡನ್:ವಿಶ್ವಾಸಾರ್ಹ ಫಲಿತಾಂಶಗಳನ್ನು ನೀಡುವ ಉತ್ತಮ ಗುಣಮಟ್ಟದ ವಿಧಾನಗಳೊಂದಿಗೆ ಕೋವಿಡ್-19ಗೆ ಯಾವ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂಬುದರ ಕುರಿತು ಹೊಸ ಅಧ್ಯಯನಗಳು ಹೆಚ್ಚಿನ ಮಾಹಿತಿ ನೀಡುತ್ತವೆ.
ಡೆಕ್ಸಮೆಥಾಸೊನ್ ಎಂಬ ಅಗ್ಗದ ಸ್ಟಿರಾಯ್ಡ್, ರೋಗಿ ಬದುಕುಳಿಯುವುದನ್ನು ಸುಧಾರಿಸುವ ಏಕೈಕ ಔಷಧ ಎಂದು ಬ್ರಿಟಿಷ್ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಪ್ರಕಟಿಸಿದ್ದಾರೆ.
ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೇವಲ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ ಸಹಾಯ ಮಾಡುವುದಿಲ್ಲ ಎಂದು ಇತರ ಎರಡು ಅಧ್ಯಯನಗಳು ಕಂಡುಹಿಡಿದಿವೆ.
ಕೋವಿಡ್-19 ಚಿಕಿತ್ಸೆಯ ಕುರಿತಾಗಿ ಇತ್ತೀಚಿನ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ:
ಡೆಕ್ಸಮೆಥಾಸೊನ್:
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ನೇತೃತ್ವದ ಬ್ರಿಟಿಷ್ ಅಧ್ಯಯನ ವ್ಯಾಪಕವಾಗಿ ಬಳಸಲಾಗುವ ಒಂದು ರೀತಿಯ ಸ್ಟಿರಾಯ್ಡ್ ಅನ್ನು ಪರೀಕ್ಷಿಸಿ, ಇದರ ಪರಿಣಾಮ ತೀವ್ರವಾಗಬಹುದು ಮತ್ತು ಕೋವಿಡ್-19ನ ನಂತರದ ಹಂತಗಳಲ್ಲಿ ಮಾರಕವಾಗಬಹುದು ಎಂದು ತಿಳಿಸಿದೆ.
ಔಷಧವನ್ನು ನೀಡಿದ ಸುಮಾರು 2,104 ರೋಗಿಗಳನ್ನು ಸಾಮಾನ್ಯ ಆರೈಕೆ ಪಡೆಯುವ 4,321 ರೋಗಿಗಳಿಗೆ ಹೋಲಿಸಲಾಗಿದೆ. ಉಸಿರಾಟದ ಯಂತ್ರಗಳ ಅಗತ್ಯವಿರುವ ರೋಗಿಗಳ ಸಾವನ್ನು ಇದು 36%ರಷ್ಟು ಕಡಿಮೆ ಮಾಡಿತು. ಔಷಧ ಸೇವಿಸದರೂ 29% ಜನರು ಸಾವನ್ನಪ್ಪಿದರು ಮತ್ತು 41%ರಷ್ಟು ಜನರಿಗೆ ಸಾಮಾನ್ಯ ಆರೈಕೆ ನೀಡಲಾಗಿದೆ.
ಕೇವಲ ಪೂರಕ ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ ಇದು ಸಾವಿನ ಅಪಾಯವನ್ನು 18%ರಷ್ಟು ತಡೆಯುತ್ತದೆ. ಔಷಧ ಸೇವಿಸಿದ 26%ರಷ್ಟು ಜನ ಸಾವನ್ನಪ್ಪಿದ್ದಾರೆ.