ಲಂಡನ್:ಇಂಗ್ಲೆಂಡ್ನ ಸಂಶೋಧಕರು ಹೊಸದಾಗಿ ಮೊಬೈಲ್ ಆಧರಿತ ಪೋರ್ಟಬಲ್ ಕೋವಿಡ್-19 ಟೆಸ್ಟ್ ಕಿಟ್ ಒಂದನ್ನು ವಿನ್ಯಾಸಗೊಳಿಸಿದ್ದು, ಇದು ಗಂಟಲಿನ ದ್ರಾವಣವನ್ನು ತೆಗೆದುಕೊಂಡು ಕೇವಲ 50 ನಿಮಿಷಗಳಲ್ಲಿ ಫಲಿತಾಂಶವನ್ನು ನೀಡಲಿದೆ.
50 ನಿಮಿಷಗಳಲ್ಲೇ ರಿಸಲ್ಟ್ ನೀಡುತ್ತೆ ಈ ಪೋರ್ಟಬಲ್ ಕೋವಿಡ್-19 ಟೆಸ್ಟ್ ಕಿಟ್!! - portable smartphone-based coronavirus testing kit
ಕೊರೊನಾ ಸೋಂಕಿರುವುದನ್ನು ದೃಢಪಡಿಸಲು ಪ್ರಸ್ತುತ 24-48 ಗಂಟೆಗಳು ಬೇಕಾಗಿದ್ದು, ಇಂಗ್ಲೆಂಡ್ನ ಸಂಶೋಧಕರು ಹೊಸದಾಗಿ ವಿನ್ಯಾಸಗೊಳಿಸಿರುವ ಪೋರ್ಟಬಲ್ ಕೋವಿಡ್-19 ಟೆಸ್ಟ್ ಕಿಟ್, ಕೇವಲ 50 ನಿಮಿಷಗಳಲ್ಲಿ ಫಲಿತಾಂಶವನ್ನು ನೀಡಲಿದೆ.
ಗಂಟಲಿನ ದ್ರಾವಣದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಿ, ಪರೀಕ್ಷಿಸಿ ಕೊರೊನಾ ಸೋಂಕಿರುವುದನ್ನು ದೃಢಪಡಿಸಲು ಪ್ರಸ್ತುತ 24-48 ಗಂಟೆಗಳು ಬೇಕಾಗಿದೆ. ಆದರೆ, ಇಂಗ್ಲೆಂಡ್ನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ (ಯುಇಎ) ಸಂಶೋಧಕರು ವಿನ್ಯಾಸಗೊಳಿಸಿರುವ ಈ ಕಿಟ್, ಏಕಕಾಲದಲ್ಲಿ 16 ಮಾದರಿಗಳನ್ನು ಪರೀಕ್ಷಿಸಲಿದೆ.
ಇದು ನ್ಯಾಷನಲ್ ಹೆಲ್ತ್ ಸರ್ವಿಸ್ನ ಸ್ವಯಂ ನಿರ್ಬಂಧಿತ ವೈದ್ಯಕೀಯ ಸಿಬ್ಬಂದಿಗಳಿಗೆ ತ್ವರಿತವಾಗಿ ಕರ್ತವ್ಯಕ್ಕೆ ಹಾಜರಾಗಲು ಅಥವಾ ಕರ್ತವ್ಯ ನಿರತ ಸಿಬ್ಬಂದಿಗಳಿಂದ ವೈರಸ್ ಹರಡದಂತೆ ತಡೆಗಟ್ಟಲು ಸಹಾಯವಾಗಿದೆ. ಇನ್ನು ಎರಡು ವಾರಗಳಲ್ಲಿ ಇದರ ಸೌಲಭ್ಯವನ್ನು ದೇಶಾದ್ಯಂತ ಇರುವ ಎಲ್ಲಾ ಆಸ್ಪತ್ರೆಗಳು ಪಡೆದುಕೊಳ್ಳುವಂತಾಗಬೇಕು ಎನ್ನುತ್ತಾರೆ ಸಂಶೋಧಕರು.