ಕರ್ನಾಟಕ

karnataka

ETV Bharat / international

ನ್ಯಾಟೋ ಪಡೆಗಳಿಂದ ಉಕ್ರೇನ್​ಗೆ ಶಸ್ತ್ರಾಸ್ತ್ರ ಪೂರೈಕೆ: ವ್ಲಾಡಿಮಿರ್ ಪುಟಿನ್​

ಡೊನ್ಬಾಸ್​ನಲ್ಲಿ ಈಗಿರುವ ಸಮಸ್ಯೆಯ ಶಾಂತಿಯುತವಾಗಿ ಇತ್ಯರ್ಥ ಮಾಡಿಕೊಳ್ಳಲು ಉಕ್ರೇನ್ ನಿರಾಕರಿಸಿದೆ. ಮಿನ್ಸ್ಕ್ ಒಪ್ಪಂದದ ನಿಯಮಗಳನ್ನು ಉಕ್ರೇನ್ ಅನುಸರಿಸುತ್ತಿಲ್ಲ ಎಂದು ವ್ಲಾಡಿಮಿರ್ ಪುಟಿನ್ ಆರೋಪಿಸಿದ್ದಾರೆ.

NATO continues to pump Ukraine with weapons: Putin
ನ್ಯಾಟೋ ಪಡೆಗಳಿಂದ ಉಕ್ರೇನ್​ಗೆ ಶಸ್ತ್ರಾಸ್ತ್ರ ಪೂರೈಕೆ: ವ್ಲಾಡಿಮಿರ್ ಪುಟಿನ್​

By

Published : Feb 8, 2022, 7:28 AM IST

ಮಾಸ್ಕೋ, ರಷ್ಯಾ: ನ್ಯಾಟೋ ಪಡೆಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವುದನ್ನು ಮುಂದುವರೆಸಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದು, ಉಕ್ರೇನ್ ಸೈನ್ಯದ ಆಧುನೀಕರಣಕ್ಕೆ ನ್ಯಾಟೋ ಪ್ರಯತ್ನಿಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ರಷ್ಯಾ-ಫ್ರೆಂಚ್ ಮಾತುಕತೆಗಳ ನಂತರ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ವ್ಲಾಡಿಮಿರ್ ಪುಟಿನ್ ನ್ಯಾಟೋದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಕ್ರೇನ್​​ಗೆ ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಮಿಲಿಟರಿ ತಜ್ಞರನ್ನು ಉಕ್ರೇನ್​ಗೆ ನ್ಯಾಟೋ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.

ಡೊನ್ಬಾಸ್​ನಲ್ಲಿ ಈಗಿರುವ ಸಮಸ್ಯೆಯ ಶಾಂತಿಯುತವಾಗಿ ಇತ್ಯರ್ಥ ಮಾಡಿಕೊಳ್ಳಲು ಉಕ್ರೇನ್ ನಿರಾಕರಿಸಿದೆ. ಮಿನ್ಸ್ಕ್ ಒಪ್ಪಂದದ ನಿಯಮಗಳನ್ನು ಉಕ್ರೇನ್ ಅನುಸರಿಸುತ್ತಿಲ್ಲ. ಈ ಒಪ್ಪಂದಗಳನ್ನು ರದ್ದು ಮಾಡಲು ಉಕ್ರೇನ್​ ಮುಂದಾಗಿದೆ ಎಂದು ಪುಟಿನ್ ಹೇಳಿದ್ದಾರೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಈ ವಿಚಾರದ ಬಗ್ಗೆ ನಾನು ಮಾತನಾಡಿದ್ದೇನೆ. ಯೂರೋಪ್ ಮತ್ತು ಉಕ್ರೇನ್​ನಲ್ಲಿ ಶಾಂತಿ ನೆಲೆಸಲು ಮಾತುಕತೆಗಳನ್ನು ನಡೆಸುವುದಾಗಿ ಅವರು ಹೇಳಿದ್ದಾರೆ ಎಂದು ಪುಟಿನ್ ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನತೆ ಭೀತಿ : ಪೋಲ್ಯಾಂಡ್​ಗೆ ಬಂದಿಳಿದ ಯುಎಸ್ ಪಡೆಗಳು

ABOUT THE AUTHOR

...view details