ಮಾಸ್ಕೋ: ಉಕ್ರೇನ್‌ನ ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಮಾಸ್ಕೋ ಮತ್ತು ಕೀವ್ ನಾಗರಿಕರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲು ಎರಡು ದೇಶಗಳು 'ಮಾನವೀಯ ಕಾರಿಡಾರ್‌ಗಳನ್ನು' ಸ್ಥಾಪಿಸಿದ್ದು, ಯುದ್ಧದ ಸ್ಥಳಗಳಿಗೆ ಔಷಧಗಳು ಮತ್ತು ಆಹಾರವನ್ನು ತಲುಪಿಸಲು ಮಾನವೀಯ ಕಾರ್ಯ ಸಾಗುತ್ತಿದೆ ಎಂದು ಉಕ್ರೇನ್ ನಿಯೋಗದ ಸದಸ್ಯ ಮಿಖಾಯಿಲ್ ಪೊಡೊಲ್ಯಾಕ್ ಹೇಳಿದ್ದಾರೆ.
ಉಕ್ರೇನ್ನಲ್ಲಿ ಸಾರ್ವಜನಿಕರ ಸ್ಥಳಾಂತರ ಕಾರ್ಯ ನಡೆಯುತ್ತಿರುವ ವಲಯಗಳಲ್ಲಿ ತಾತ್ಕಾಲಿಕವಾಗಿ ಕದನ ವಿರಾಮ ಜಾರಿಯಾಗುವ ಸಾಧ್ಯತೆ ಇದೆ ಎಂದು ಆರ್‌ಟಿ ವರದಿ ಮಾಡಿದೆ. ಪೊಡೊಲ್ಯಾಕ್ ನೀಡಿರುವ ಮಾಹಿತಿ ಪ್ರಕಾರ, ಕೀವ್ ಮತ್ತು ಮಾಸ್ಕೋದ ಪ್ರತಿನಿಧಿಗಳ ನಡುವಿನ ಮಾತುಕತೆಯ ಸಮಯದಲ್ಲಿ ಮಾನವೀಯ ಅಂಶಗಳ ಕುರಿತು ವಿವರವಾಗಿ ಚರ್ಚಿಸಲಾಗಿದೆ. ಜೊತೆಗೆ ಇಲ್ಲಿನ ಜನರಿಗೆ ಮಾನವೀಯ ಕಾರಿಡಾರ್‌ಗಳ ಕುರಿತು ತಿಳಿವಳಿಕೆ ಕೂಡಾ ನೀಡಲಾಗುತ್ತಿದೆ .