ಕರ್ನಾಟಕ

karnataka

ETV Bharat / international

'ಉಕ್ರೇನ್​​ನಲ್ಲಿ ಈವರೆಗೆ 2,000 ನಾಗರಿಕರು, ರಷ್ಯಾದ 6,000 ಯೋಧರ ಸಾವು' - ರಷ್ಯಾ ಉಕ್ರೇನ್​ ಸಂಘರ್ಷ

ರಷ್ಯಾ ನಡೆಸುತ್ತಿರುವ ನಿರಂತರ ದಾಳಿಯ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಇಲ್ಲಿಯವರೆಗೆ 2 ಸಾವಿರಕ್ಕೂ ಅಧಿಕ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್‌ ತುರ್ತು ಸೇವಾ ವಿಭಾಗ ತಿಳಿಸಿದೆ. ಇದೇ ವೇಳೆ ರಷ್ಯಾದ 6 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್‌ ಅಧ್ಯಕ್ಷರು ಹೇಳಿದ್ದಾರೆ.

Ukrain civilians killed during Russian invasion
Ukrain civilians killed during Russian invasion

By

Published : Mar 2, 2022, 8:06 PM IST

Updated : Mar 2, 2022, 8:17 PM IST

ಕೀವ್​​(ಉಕ್ರೇನ್​): ಕಳೆದ ಏಳು ದಿನಗಳಿಂದ ಉಕ್ರೇನ್​​ನ ವಿವಿಧ ನಗರಗಳ ಮೇಲೆ ರಷ್ಯಾ ಮಿಲಿಟರಿ ದಾಳಿಯ ಹಿನ್ನೆಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಉಕ್ರೇನ್‌ ತುರ್ತು ಸೇವಾ ವಿಭಾಗ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಉಕ್ರೇನ್​​ನಲ್ಲಿ ಬಿಡುಬಿಟ್ಟಿರುವ ರಷ್ಯಾ ಮಿಲಿಟರಿ ಪಡೆ

ಉಕ್ರೇನ್‌ನ ಹಲವು ಭಾಗಗಳಲ್ಲಿ ಸಾರಿಗೆ ಸೌಲಭ್ಯಗಳು, ಆಸ್ಪತ್ರೆಗಳು, ಶಿಶು ವಿಹಾರ, ವಸತಿ ಕಟ್ಟಡಗಳು ಸಂಪೂರ್ಣವಾಗಿ ನೆಲಸಮವಾಗಿದೆ. ಬಾಂಬ್, ಶೆಲ್‌ ದಾಳಿಗಳಿಂದಾಗಿ ಮಕ್ಕಳು, ಮಹಿಳೆಯರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂದು ತುರ್ತು ಸೇವಾ ವಿಭಾಗ ಕಳವಳ ವ್ಯಕ್ತಪಡಿಸಿದೆ.

ಉಕ್ರೇನ್​ ಖಾರ್ಕಿವ್​ನಲ್ಲಿ ಶೆಲ್ ದಾಳಿ ನಡೆಸಿದ ರಷ್ಯಾ

ರಷ್ಯಾದ 6 ಸಾವಿರ ಯೋಧರ ಸಾವು: ಮತ್ತೊಂದೆಡೆ, ಉಕ್ರೇನ್​ ಅಧ್ಯಕ್ಷರು ರಷ್ಯಾ ಮಿಲಿಟರಿ ಪಡೆಯ 6 ಸಾವಿರ ಯೋಧರನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ನೋಡಿ: ರಷ್ಯಾದ ಭೀಕರ ದಾಳಿಗೆ ಉಕ್ರೇನ್‌ ​ತತ್ತರ, ಕೀವ್‌ನಲ್ಲಿ ವಾಣಿಜ್ಯ ಕಟ್ಟಡಗಳು ಧ್ವಂಸ

Last Updated : Mar 2, 2022, 8:17 PM IST

ABOUT THE AUTHOR

...view details