ಕೈವ್(ಉಕ್ರೇನ್): ಯೂರೋಪ್ನ ಅತಿ ಎತ್ತರ ಪ್ರತಿಮೆ 85 ಮೀಟರ್ ಅಂದರೆ 278 ಅಡಿ ಎತ್ತರವಿರುವ ಖಡ್ಗ ಹಿಡಿದಿರುವ ಮಹಿಳೆಯ ಪ್ರತಿಮೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಿಜಯದ ನೆನಪಿಗೆ ಮುನ್ನೆಲೆಗೆ ಬಂದಿದೆ.
ಎರಡನೇ ಮಹಾಯುದ್ಧದ ಸ್ಟ್ಯಾಲಿನ್ಗ್ರಾಡ್ ಕದನದಲ್ಲಿ ನಡೆದ ಜರ್ಮನಿಯ ನಾಜಿ ಪಕ್ಷದವರು ರಷ್ಯಾದ ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಈ ವೇಳೆ ಎರಡು ಸಾರ್ವಜನಿಕರು ಸೇರಿದಂತೆ ಎರಡು ಮಿಲಿಯನ್ ಸೈನಿಕರು ಮೃತಪಟ್ಟಿದ್ದರು.
ಮೊದಲಿಗೆ ಸ್ಟ್ಯಾಲಿನ್ಗ್ರಾಡ್ ಎಂದು ಕರೆಯಲಾಗುತ್ತಿದ್ದ ವೋಲ್ಗೋಗ್ರಾಡ್ ನಗರದಲ್ಲೇ ಸುಮಾರು 35 ಸಾವಿರ ಮಂದಿ ಸಾವನ್ನಪ್ಪಿದ್ದರು. ಇದರ ನೆನಪಿಗಾಗಿ ಈ ಪ್ರತಿಮೆಯನ್ನು 1967ರಲ್ಲಿ ಈ ಪ್ರತಿಮೆಯನ್ನು ನಿರ್ಮಿಸಿ ಮದರ್ಲ್ಯಾಂಡ್ ಕಾಲ್ಸ್ (ಜನ್ಮಭೂಮಿ ಕರೆಯುತ್ತಿದೆ) ಎಂದು ನಾಮಕರಣ ಮಾಡಲಾಗಿತ್ತು.
ಶಿಲ್ಪಿ ಯೆವ್ಗೆನಿ ವುಚೆಟಿಚ್ ಮತ್ತು ಎಂಜಿನಿಯರ್ ನಿಕೊಲಾಯ್ ನಿಕಿಟಿನ್ ತಾಯಿನಾಡಿನ ರಕ್ಷಣೆಗಾಗಿ ಯುವಕರಿಗೆ ಪ್ರೇರೇಪಿಸಲು, ಶತೃಗಳ ಮೇಲೆ ತಿರುಗಿ ದಾಳಿ ಮಾಡಲು ಉತ್ತೇಜಿಸಲು ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.