ಕರ್ನಾಟಕ

karnataka

ETV Bharat / international

ಆಡಿದ್ದು ಎರಡೇ ಪಂದ್ಯ.. ಮೂರು ದಾಖಲೆ ಬರೆದ ಮೊಹ್ಮದ್ ಶಮಿ! - Kannada news

ತಾಳ್ಮೆ ಮನುಷ್ಯನಿಗಿದ್ರೇ ಏನಾದರೂ ಸಾಧಿಸಬಹುದು ಅನ್ನೋದಕ್ಕೆ ಭಾರತೀಯ ಬೌಲರ್‌ ಮೊಹ್ಮದ್‌ ಶಮಿ ಒಂದೊಳ್ಳೆ ಉದಾಹರಣೆ. ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಇದರ ಜತೆಗೆ ವಿಶ್ವಕಪ್‌ಗೆ ಆಯ್ಕೆಯಾದರೂ ಬೆಂಚ್‌ ಕಾಯೋದಾಗಿತ್ತು. ಆದರೆ, ಆಡಲು ಚಾನ್ಸ್‌ ಸಿಕ್ಕ 2 ಪಂದ್ಯಗಳಲ್ಲೂ ಮೂರು ದಾಖಲೆ ಮಾಡಿದ್ದಾರೆ ಶಮಿ.

ಮೂರು ದಾಖಲೆ ಬರೆದ ಮೊಹ್ಮದ್ ಶಮಿ

By

Published : Jun 28, 2019, 8:09 PM IST

Updated : Jun 28, 2019, 8:29 PM IST

ಮ್ಯಾಂಚೆಸ್ಟರ್‌ : ತಾಳ್ಮೆ ಮನುಷ್ಯನಿಗಿದ್ರೇ ಏನಾದರೂ ಸಾಧಿಸಬಹುದು ಅನ್ನೋದಕ್ಕೆ ಭಾರತೀಯ ಬೌಲರ್‌ ಮೊಹ್ಮದ್‌ ಶಮಿ ಒಂದೊಳ್ಳೆ ಉದಾಹರಣೆ. ವೈಯಕ್ತಿ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಇದರ ಜತೆಗೆ ವಿಶ್ವಕಪ್‌ಗೆ ಆಯ್ಕೆಯಾದರೂ ಬೆಂಚ್‌ ಕಾಯೋದಾಗಿತ್ತು. ಆದರೆ, ಆಡಲು ಚಾನ್ಸ್‌ ಸಿಕ್ಕ 2 ಪಂದ್ಯಗಳಲ್ಲೂ ಮೂರು ದಾಖಲೆ ಮಾಡಿದ್ದಾರೆ ಶಮಿ.

ಕೃಪೆ : ಟ್ವಿಟರ್... ಮೊಹ್ಮದ್ ಶಮಿ

ಭುವಿ ಬದಲು ಅವಕಾಶ ಗಿಟ್ಟಿಸಿ, ಬೊಂಬಾಟ್ ಬೌಲಿಂಗ್!

ಮೊಹ್ಮದ್‌ ಶಮಿ ಅನ್ನೋ ಫಾಸ್ಟ್‌ ಬೌಲರ್‌ ಈಗ ಭಾರತೀಯರಿಗೆ ಹೀರೋ. ಆಡಿದ ಎರಡನೇ ವಿಶ್ವಕಪ್‌ನಲ್ಲಿ ಮೂರು ದಾಖಲೆ ಮಾಡಿ ಮಿಂಚುತ್ತಿದ್ದಾರೆ. ಪಾಕ್‌ ವಿರುದ್ಧದ ಪಂದ್ಯದಲ್ಲಿ ಮಂಡಿರಜ್ಜು ಗಾಯದಿಂದ ಭುವನೇಶ್ವರಕುಮಾರ್‌ ತಂಡದಿಂದ ಹೊರಗುಳಿದಿದ್ದರು. ಆವರೆಗೂ 3 ಪಂದ್ಯ ಬೆಂಚ್‌ ಕಾಯ್ದಿದ್ದ ಶಮಿಗೆ ಆಪ್ಘನ್‌ ವಿರುದ್ಧ ಮ್ಯಾಚ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆದರೆ, ತಮ್ಮ ಸಾಮರ್ಥ್ಯವನ್ನ ಮೊದಲ ಪಂದ್ಯದಲ್ಲಿ ಸಾಬೀತು ಮಾಡಿದ್ದರು ಮೊಹ್ಮದ್ ಶಮಿ.

ಕೃಪೆ : ಟ್ವಿಟರ್... ಮೊಹ್ಮದ್ ಶಮಿ

28 ವರ್ಷದ ಹಿಂದೆ ಚೇತನ್ ಶರ್ಮಾ ಈಗ ಮೊಹ್ಮದ್‌ ಶಮಿ!

ವರ್ಲ್ಡ್‌ಕಪ್‌ನಲ್ಲಿ ಭಾರತೀಯ ಬೌಲರ್‌ ಚೇತನ್‌ ಶರ್ಮಾ 28 ವರ್ಷದ ಹಿಂದೆ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಮಿಂಚಿದರು. ಅದಾದ ಬಳಿಕ ಈವರೆಗೂ ಯಾವೊಬ್ಬ ಭಾರತೀಯ ಬೌಲರ್ ಆ ಸಾಧನೆ ಮಾಡಿರಲಿಲ್ಲ. ಆದರೆ, ಭುವಿ ಬದಲು ಆಡಲು ಅವಕಾಶ ಪಡೆದಿದ್ದ ಮೊಹ್ಮದ್‌ ಶಮಿ ಕೊನೆಯ ಓವರ್‌ನಲ್ಲಿ ಮೂವರು ಬ್ಯಾಟ್ಸ್‌ಮೆನ್‌ಗಳನ್ನ ಬಲಿ ಪಡೆದಿರು. ಮೊದಲು ಕ್ಯಾಚ್‌ ಬಲೆಗೆ ಕೆಡವಿಕೊಂಡ್ರೇ, ಇನ್ನುಳಿದ ಅದ್ಭುತ 2 ಬಾಲ್‌ಗಳಲ್ಲಿ ಇಬ್ಬರೂ ಆಪ್ಘನ್‌ ಬ್ಯಾಟ್ಸ್‌ಮೆನ್‌ಗಳನ್ನ ಬೋಲ್ಡ್‌ ಮಾಡಿದರು. ಅಷ್ಟೇ ಅಲ್ಲ, ಪಂದ್ಯದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದರು.

ಕೃಪೆ : ಟ್ವಿಟರ್... ಚೇತನ್‌ ಶರ್ಮಾ

ಉಮೇಶ್‌ ಯಾದವ್‌ ಬಿಟ್ರೇ ಶಮಿ ಈ ಸಾಧನೆ ಮಾಡಿದ ಬೌಲರ್!

2015ರ ವರ್ಲ್ಡ್‌ಕಪ್‌ನಲ್ಲಿ ಉಮೇಶ್‌ ಯಾದವ್‌ 2 ಪಂದ್ಯದಿಂದ ಸತತ 4 ವಿಕೆಟ್‌ ಪಡೆದಿದ್ದರು. ಬೆಂಚ್‌ ಕಾಯ್ದು 3 ಪಂದ್ಯದ ಬಳಿಕ ಆಡಲು ಚಾನ್ಸ್‌ ಗಿಟ್ಟಿಸಿದ ಮೊಹ್ಮದ್‌ ಶಮಿ ಸತತ 2 ಪಂದ್ಯದಿಂದ ತಲಾ 4 ವಿಕೆಟ್‌ ಕಿತ್ತು ಉಮೇಶ್ ಯಾದವ್‌ ದಾಖಲೆ ಸರಿಗಟ್ಟಿದ್ದಾರೆ. ಸದ್ಯಕ್ಕೆ ಭಾರತೀಯ ತಂಡಕ್ಕೆ ಅನಿವಾರ್ಯ ಅನ್ನೋ ರೀತಿಯಲ್ಲಿ ಬೌಲಿಂಗ್‌ ಪರ್ಫಾಮೆನ್ಸ್‌ ತೋರಿಸುತ್ತಿದ್ದಾರೆ ವೇಗದ ಬೌಲರ್‌ ಶಮಿ. ಇದಷ್ಟೇ ಅಲ್ಲ, ವಿಂಡೀಸ್‌ ವಿರುದ್ಧ ವಿಶ್ವಕಪ್‌ನಲ್ಲಿ 4 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಎಂಬ ಗರಿ ಮೊಹ್ಮದ್‌ ಶಮಿಗೆ ಮೂಡಿದೆ.

ಕೃಪೆ : ಟ್ವಿಟರ್... ಉಮೇಶ್ ಯಾದವ್

1983, 2011ರ ವಿಶ್ವಕಪ್‌ ಭಾರತದ ಮುಡಿಗೆ, ಈ ಸಾರಿನೂ ಚಾನ್ಸ್‌!

2019ರ ವರ್ಲ್ಡ್‌ಕಪ್‌ನಲ್ಲಿ ಮ್ಯಾಂಚೆಸ್ಟರ್ನಲ್ಲಿ ನಿನ್ನೆ ನಡೆದ ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಮೊಹ್ಮದ್‌ ಶಮಿ 10 ಓವರ್‌ ಬೌಲ್‌ ಮಾಡಿ 16 ರನ್‌ ಕೊಟ್ಟು 4 ವಿಕೆಟ್‌ ಕಿತ್ತಿದ್ದಾರೆ. 1983ರಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ನಡೆದ ವಿಂಡೀಸ್‌ ವಿರುದ್ಧದ ವಿಶ್ವಕಪ್‌ನಲ್ಲಿ 12 ರನ್‌ ನೀಡಿ ಮೋಹಿಂದರ್ ಅಮರನಾಥ್‌ 3 ವಿಕೆಟ್‌ ಪಡೆದಿದ್ದರು. ಅದೇ ವರ್ಲ್ಡ್‌ಕಪ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಕೆರಿಬಿಯನ್ನರ ವಿರುದ್ಧದ ಪಂದ್ಯದಲ್ಲಿ ರವಿಶಾಸ್ತ್ರಿ ಸಹ 26 ರನ್‌ ನೀಡಿ 3 ವಿಕೆಟ್‌ ಕಿತ್ತಿದ್ದರು. 2011ರ ವಿಶ್ವಕಪ್‌ನಲ್ಲಿ ಚೆನ್ನೈನಲ್ಲಿ ನಡೆದ ವಿಂಡೀಸ್‌ ವಿರುದ್ಧದ ಮ್ಯಾಚ್‌ನಲ್ಲಿ ಜಹೀರ್‌ ಖಾನ್‌ 26 ರನ್‌ ನೀಡಿ 3 ಕೆರಿಬಿಯನ್ನರನ್ನ ತಮ್ಮ ಬಲೆಗೆ ಕೆಡವಿಕೊಂಡಿದ್ದರು. ವಿಂಡೀಸ್‌ ವಿರುದ್ಧ ಭಾರತೀಯ ಬಾಲರ್‌ ಮಿಂಚಿದ್ದ 2 ವಿಶ್ವಕಪ್‌ನಲ್ಲೂ ಭಾರತ್‌ ಫೈನಲ್‌ ಗೆದ್ದು ಬೀಗಿದೆ. ಈಗ ಅಂತಹುದೇ ಮತ್ತೊಂದು ಚಾನ್ಸ್‌ ಬ್ಲ್ಯೂಬಾಯ್ಸ್‌ಗೂ ಇದೆ.

ಕೃಪೆ : ಟ್ವಿಟರ್... ಮೊಹ್ಮದ್ ಶಮಿ
ಕೃಪೆ : ಟ್ವಿಟರ್... ಮೊಹ್ಮದ್ ಶಮಿ
ಕೃಪೆ : ಟ್ವಿಟರ್... ಮೊಹ್ಮದ್ ಶಮಿ ಮತ್ತು ಭುವನೇಶ್ವರಕುಮಾರ್‌
ಕೃಪೆ : ಟ್ವಿಟರ್... ಮೊಹ್ಮದ್ ಶಮಿ
ವಿಂಡೀಸ್ ವಿರುದ್ಧ ಭಾರತೀಯ ಬೌಲರ್‌ಗಳ ಸಾಧನೆ..

ಬೌಲರ್‌ ವಿಕೆಟ್ಸ್‌ ಸ್ಥಳ ವರ್ಷ

*ಮೊಹ್ಮದ್‌ ಶಮಿ4/16 ಮ್ಯಾಂಚೆಸ್ಟರ್‌ 2019

*ಮೋ.ಅಮರನಾಥ್‌ 3/12 ಲಾರ್ಡ್ಸ್‌ 1983

*ರವಿಶಾಸ್ತ್ರಿ3/26 ಮ್ಯಾಂಚೆಸ್ಟರ್‌ 1983
*ಜಹೀರ್‌ ಖಾನ್‌ 3/26 ಚೆನ್ನೈ 2011

ಈಗ ಭುವಿ ಮತ್ತೆ ಫಿಟ್ ಆಗಿದ್ದಾರೆ. ಹಾಗಂತಾ ದಾಖಲೆ ಬರೆದು ನಿರೀಕ್ಷೆ ಹುಟ್ಟಿಸಿರುವ ಮೊಹ್ಮದ್ ಶಮಿ ಕೈಬಿಡೋದು ಕಷ್ಟ. ಆಯ್ಕೆ ಮಂಡಳಿ ಮತ್ತು ಕ್ಯಾಪ್ಟನ್‌ ಕೊಹ್ಲಿ ಈಗ ನಿಜವಾಗಲೂ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆದರೆ, ಬೌಲರ್‌ಗಳ ಈ ಪೈಪೋಟಿ ಭಾರತ ತಂಡಕ್ಕೆ ಒಳ್ಳೇಯದು.

ಕೃಪೆ : ಟ್ವಿಟರ್... ಮೊಹ್ಮದ್ ಶಮಿ
Last Updated : Jun 28, 2019, 8:29 PM IST

ABOUT THE AUTHOR

...view details