ಕರ್ನಾಟಕ

karnataka

ETV Bharat / international

ಐರೊಪ್ಯ ಒಕ್ಕೂಟದಿಂದ ಯುಕೆ ನಿರ್ಗಮನ: ಬ್ರಸೆಲ್ಸ್​ ಸಂಸತ್ತಿನಲ್ಲಿ ಸೃಷ್ಟಿಯಾಯ್ತು ಭಾವನಾತ್ಮಕ ಸನ್ನಿವೇಶ! - Mixed emotions at Brussels as UK finally exits from EU

28 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದ ಐರೊಪ್ಯ ಒಕ್ಕೂಟದಿಂದ ಬ್ರಿಟನ್​ ನಿರ್ಗಮನದೊಂದಿಗೆ ಒಕ್ಕೂಟದ ಸದಸ್ಯರ ಸಂಖ್ಯೆ ಕಡಿಮೆಯಾದಂತಾಗಿದೆ. ಇದು ಮುಂದಿನ ವರ್ಷಗಳಲ್ಲಿ ಕಠಿಣ ವ್ಯಾಪಾರ ಮಾತುಕತೆಗಳಿಗೆ ನಾಂದಿಯನ್ನೂ ಹಾಡಿದಂತಾಗಿದೆ

UK finally exits from EU
ಐರೊಪ್ಯ ಒಕ್ಕೂಟದಿಂದ ಯುಕೆ ನಿರ್ಗಮನ

By

Published : Jan 30, 2020, 10:59 PM IST

ಬ್ರಸೆಲ್ಸ್(ಬೆಲ್ಜಿಯಂ): 28 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದ ಐರೊಪ್ಯ ಒಕ್ಕೂಟದಿಂದ ಯುನೈಟೆಡ್​ ಕಿಂಗ್​ಡಮ್​(ಬ್ರಿಟನ್​) ನಿರ್ಗಮಿಸಿದೆ. ಬುಧವಾರ ಬ್ರಸೆಲ್ಸ್​ನಲ್ಲಿರುವ ಯುರೋಪಿಯನ್​ ಒಕ್ಕೂಟದ ಸಂಸತ್ತಿನಲ್ಲಿ ಬ್ರಿಟನ್​ ರಾಷ್ಟ್ರವನ್ನು ಒಲ್ಲದ ಮನಸ್ಸಿನಿಂದ ಹೊರ ಕಳುಹಿಸಲಾಯಿತು.

ಬ್ರಸೆಲ್ಸ್​ ಸಂಸತ್ತಿನಲ್ಲಿ ಭಾವನಾತ್ಮಕ ಸನ್ನಿವೇಶ

28 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದ ಐರೊಪ್ಯ ಒಕ್ಕೂಟದಿಂದ ಬ್ರಿಟನ್​ ನಿರ್ಗಮನದೊಂದಿಗೆ ಒಕ್ಕೂಟದ ಸದಸ್ಯರ ಸಂಖ್ಯೆ ಕಡಿಮೆಯಾದಂತಾಗಿದೆ. ಇದು ಮುಂದಿನ ವರ್ಷಗಳಲ್ಲಿ ಕಠಿಣ ವ್ಯಾಪಾರ ಮಾತುಕತೆಗಳಿಗೂ ನಾಂದಿ ಹಾಡಿತು.

ಬ್ರಸೆಲ್ಸ್​ ಸಂಸತ್ತಿನಲ್ಲಿ ಭಾವನಾತ್ಮಕ ಸನ್ನಿವೇಶ

ಬ್ರಸೆಲ್ಸ್‌ನಲ್ಲಿ ನಡೆದ ಭಾವನಾತ್ಮಕ ಆವೇಶದ ಅಧಿವೇಶನದಲ್ಲಿ, ಎಲ್ಲಾ 28 ಐರೊಪ್ಯ ಒಕ್ಕೂಟ ದೇಶಗಳ ಶಾಸಕರು ತಮ್ಮ ಪ್ರೀತಿ ಮತ್ತು ದುಃಖವನ್ನು ತೋರ್ಪಡಿಸಿದರು. ಸಂಸತ್ತಿನಲ್ಲಿ ವಿದಾಯ ಗೀತೆ ಮೊಳಗಿದ ಸಂದರ್ಭದಲ್ಲಿ ಹಲವರು ಅಳುತ್ತಿದ್ದ ಸನ್ನಿವೇಶವೂ ಸೃಷ್ಟಿಯಾಗಿತ್ತು.

ಬ್ರಸೆಲ್ಸ್​ ಸಂಸತ್ತಿನಲ್ಲಿ ಭಾವನಾತ್ಮಕ ಸನ್ನಿವೇಶ

47 ವರ್ಷಗಳ ಸುದೀರ್ಘ ಸದಸ್ಯತ್ವದ ನಂತರ ಬ್ರಿಟನ್ ಐರೊಪ್ಯ ಒಕ್ಕೂಟವನ್ನು ತೊರೆಯುತ್ತಿದೆ. ಇದು ಐರೊಪ್ಯ ಒಕ್ಕೂಟ ತೊರೆದ ಮೊದಲ ದೇಶವಾಗಿದ್ದು, ಈ ಮೂಲಕ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸಂಖ್ಯೆ 27ಕ್ಕೆ ಇಳಿದಿದೆ.

ABOUT THE AUTHOR

...view details