ಕೀವ್(ಉಕ್ರೇನ್): ರಷ್ಯಾ ಮಿಲಿಟರಿ ದಾಳಿಗೆ ಉಕ್ರೇನ್ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಯೋಧರು ಸೇರಿದಂತೆ ಅನೇಕ ನಾಗರಿಕರು ಈಗಾಗಲೇ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಯೋಧನೊಬ್ಬನ ಭಾವುಕ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಉಕ್ರೇನ್ನ ಪ್ರಮುಖ ನಗರಗಳನ್ನ ಗುರಿಯಾಗಿಸಿಕೊಂಡು ರಷ್ಯಾ ಮಿಲಿಟರಿ ಪಡೆಗಳು ದಾಳಿ ನಡೆಸುತ್ತಿದ್ದು, ಪರಿಣಾಮ ನೂರಾರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಉಕ್ರೇನ್ ಯೋಧ ಮಮ್ಮಿ, ಡ್ಯಾಡಿ ಐ ಲವ್ ಯೂ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ರಷ್ಯಾ ಮಿಲಿಟರಿ ಪಡೆ ದಾಳಿ ನಡೆಸುವುದಕ್ಕೂ ಸ್ವಲ್ಪ ಸಮಯದ ಮುಂಚೆ ಯೋಧ ಈ ವಿಡಿಯೋ ಮಾಡಿದ್ದಾನೆ ಎನ್ನಲಾಗ್ತಿದ್ದು, ಆತನ ಮೇಲೆ ಸಹ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಯೋಧನ 13 ಸೆಕೆಂಡ್ಗಳ ವಿಡಿಯೋ ಇದೀಗ ವೈರಲ್ ಆಗಿದ್ದು, ಆತನ ಭಾವುಕ ಮಾತುಗಳಿಗೆ ಅನೇಕರು ಮರುಗಿದ್ದಾರೆ.