ಬರ್ಲಿನ್ (ಜರ್ಮನಿ):ಜರ್ಮನಿಯ ಹನೌ ನಗರದಲ್ಲಿ ಬುಧವಾರ ನಡೆದ ಸಾಮೂಹಿಕ ಗುಂಡಿನ ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪರಿಚಿತರಿಂದ ಗುಂಡಿನ ದಾಳಿ: ಎಂಟು ಜನ ಸಾವು, ಐವರು ಗಂಭೀರ - ಸಾಮುಹಿಕ ಗುಂಡಿನ ದಾಳಿಗೆ 8 ಜನ ಸಾವು
ಎರಡು ಪ್ರತ್ಯೇಕ ಬಾರ್‌ಗಳಲ್ಲಿ ಇಬ್ಬರು ಅಪರಿಚಿತರು ನಡೆಸಿದ ಗುಂಡಿನ ದಾಳಿಗೆ 8 ಜನ ಬಲಿಯಾಗಿದ್ದಾರೆ.
ಬಾರ್ಗಲ್ಲಿ ಅಪರಿಚಿತರಿಂದ ಗುಂಡಿನ ದಾಳಿ
ಹನೌದಲ್ಲಿನ ಎರಡು ಪ್ರತ್ಯೇಕ ಶಿಶಾ ಬಾರ್‌ಗಳಲ್ಲಿ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಸಾಮೂಹಿಕವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶಂಕಿತರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದ್ದು, ದಾಳಿಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.