ನೆದರ್‌ಲ್ಯಾಂಡ್:ರಸ್ತೆಅಪಘಾತ ಸಂಭವಿಸಿದಾಗ ಪ್ರಾಣ ಕಳೆದುಕೊಳ್ಳುವುದು ಅಥವಾ ಗಂಭೀರವಾದ ಗಾಯ ಸಂಭವಿಸುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ, ನಡೆದ ಎರಡು ಕಾರುಗಳ ನಡುವಿನ ಡಿಕ್ಕಿ ಓರ್ವ ಚಾಲಕನ ಪ್ರಾಣ ಉಳಿಸಿದೆ. ಅದು ಹೇಗೆ ಗೊತ್ತೇ?
ಪ್ರಾಣ ತೆಗೆಯಲು ಅಲ್ಲ, ಪ್ರಾಣ ರಕ್ಷಣೆಗೆ ಕಾರು ಅಪಘಾತ ಮಾಡಿಸಿದ ಚಾಲಕ: ವಿಡಿಯೋ ನೋಡಿ - car accident
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವನ ಪ್ರಾಣ ಉಳಿಸಲು ಮತ್ತೊಂದು ಕಾರಿನ ಚಾಲಕ ತನ್ನ ಕಾರನ್ನೇ ತ್ಯಾಗ ಮಾಡಿದ್ದಾನೆ. ಈ ರೀತಿಯ ಘಟನೆಯೊಂದು ಯೂರೋಪಿನ ನೆದರ್‌ಲ್ಯಾಂಡ್ ದೇಶದಲ್ಲಿ ನಡೆಯಿತು.
ನೆದರ್ಲ್ಯಾಂಡ್ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಕಾರು ಚಾಲನೆ ಮಾಡ್ತಿದ್ದ ವ್ಯಕ್ತಿಯೋರ್ವ ಪ್ರಜ್ಞಾಹೀನ ಸ್ಥಿತಿಗೆ (unconscious state) ತಲುಪಿದ್ದು, ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿದೆ. ಈ ವೇಳೆ ಅದನ್ನು ಗಮನಿಸಿರುವ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿ ಆತನ ಜೀವ ಉಳಿಸಲು ತನ್ನ ಕಾರು (Man sacrifices his car) ತ್ಯಾಗ ಮಾಡಿದ್ದಾನೆ.
ರಸ್ತೆಯಲ್ಲಿ ಕಾರು ಅಡ್ಡಾದಿಡ್ಡಿ ಚಲಿಸುವುದನ್ನು ನೋಡಿರುವ ಇನ್ನೊಂದು ಕಾರಿನ ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿ ಆ ಕಾರಿನ ಹಿಂಭಾಗಕ್ಕೆ ಗುದ್ದಿ ನಿಲ್ಲಿಸಿದ್ದಾನೆ. ಈ ವೇಳೆ ಕಾರು ನಿಂತಿದೆ. ಈ ಮುಖೇನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರು ಚಾಲಕನ ಪ್ರಾಣ ಉಳಿಸಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 7.15 ಲಕ್ಷ ಬಾರಿ ವೀಕ್ಷಣೆಗೆ ಒಳಪಟ್ಟಿದೆ.