ಕರ್ನಾಟಕ

karnataka

ETV Bharat / international

ಆತುರದಲ್ಲಿ ಲಾಕ್​ಡೌನ್​ ತೆಗೆದುಹಾಕಿದರೆ ಕೊರೊನಾ ವೈರಸ್​ ಡೆಡ್ಲಿ ಡೇಂಜರಸ್​: ಡಬ್ಲ್ಯೂ ಹೆಚ್​ ಒ ಎಚ್ಚರಿಕೆ - ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್

ಶೀಘ್ರವಾಗಿ ಲಾಕ್ ಡೌನ್ ಹಾಗೂ ನಿರ್ಬಂಧಗಳನ್ನು ತೆಗೆದುಹಾಕುವುದು ಮಾರಣಾಂತಿಕ ಪರಿಣಾಮ ಬೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ.

who
who

By

Published : Apr 11, 2020, 8:37 AM IST

ಜಿನೀವಾ (ಸ್ವಿಜರ್​ಲ್ಯಾಂಡ್): ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಹೇರಿದ ಲಾಕ್​ಡೌನ್​ ಹಾಗೂ ನಿರ್ಬಂಧಗಳನ್ನು ತ್ವರಿತವಾಗಿ ತೆಗೆದುಹಾಕುವುದು ಮಾರಣಾಂತಿಕ ಪರಿಣಾಮ ಬೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

"ಶೀಘ್ರವಾಗಿ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾವುದನ್ನೇ ವಿಶ್ವ ಆರೋಗ್ಯ ಸಂಸ್ಥೆ ಬಯಸಿದೆ. ಆದರೆ, ಹಾಗೆ ಮಾಡುವುದರಿಂದ ಮಾರಣಾಂತಿಕ ಪರಿಣಾಮವಾಗಲಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದರು.

"ಸರಿಯಾದ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅಪಾಯ ಎದುರಾಗಲಿದೆ" ಎಂದು ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ.

ABOUT THE AUTHOR

...view details