ಸೆಲ್ಸ್ಟನ್:ಕೊರೊನಾ ಕಾರ್ಮೊಡ ಇಡೀ ಜಗತ್ತನ್ನೇ ಆವರಿಸಿದೆ. ಈ ಮಧ್ಯೆ ಇಂಗ್ಲೆಂಡ್‌ನ ವಯೋ ವೃದ್ಧರ ಕೇರ್ ಹೋಂಗಳು ಸಾವು - ಬದುಕಿನ ಮನೆಯಾಗಿ ಪರಿಣಮಿಸಿವೆ. ಈ ಆತಂಕದ ನಡುವೆಯೂ ಇಳಿವಯಸ್ಸಿನ ಇವರು ಸಂತೋಷ ಕೂಟಗಳ ಮೂಲಕ ದುಗುಡ ದೂರ ಮಾಡಿಕೊಳ್ಳುತ್ತಿದ್ದಾರೆ.
ಕೇರ್ ಹೋಮ್ ನಿವಾಸಿ ಡೋರಿಸ್ ಟೇಲರ್ ಕೊರೊನಾ ನಡುವೆಯೂ ತಮ್ಮ 90 ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಸಾಮಾನ್ಯವಾಗಿ, ನಾಟಿಂಗ್ಹ್ಯಾಮ್ಶೈರ್ವ್ರೆನ್ ಹಾಲ್ ಕೇರ್ ಹೋಂನ ಎಲ್ಲ ನಿವಾಸಿಗಳು ಮತ್ತು ಸಿಬ್ಬಂದಿ ಪ್ರತಿಯೊಬ್ಬರ ಜನ್ಮದಿನವನ್ನು ಆಚರಿಸುತ್ತಾರೆ. ಕೊರೊನಾ ವೈರಸ್‌ನಿಂದಾಗಿ ಯುನೈಟೆಡ್ ಕಿಂಗ್‌ಡಮ್ ಮೂರು ವಾರಗಳಿಗಿಂತಲೂ ಹೆಚ್ಚು ಸಮಯ ಲಾಕ್‌ಡೌನ್‌ಗೆ ಒಳಪಟ್ಟಿದೆ. ಇದು ಇಂಗ್ಲೆಂಡ್‌ನ ಉತ್ತರದಲ್ಲಿರುವ ವಸತಿ ಮತ್ತು ಆರೈಕೆ ಮನೆ. ಇಲ್ಲಿನ 54 ನಿವಾಸಿಗಳಲ್ಲಿ 27 ಜನರು ಕೊರೊನಾಗೆ ಒಳಗಾಗಿದ್ದಾರೆ ಮತ್ತು ಅವರಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.