ಕರ್ನಾಟಕ

karnataka

ETV Bharat / international

ರಷ್ಯಾ-ಉಕ್ರೇನ್​ ಸಂಘರ್ಷ: ಕೀವ್​ ಸೇರಿ 4 ನಗರಗಳಲ್ಲಿ ಕದನ ವಿರಾಮ ಘೋಷಣೆ - ಉಕ್ರೇನ್​ನಲ್ಲಿ ಕದನ ವಿರಾಮ

ಉಕ್ರೇನ್​ನ ವಿವಿಧ ನಗರಗಳಲ್ಲಿ ಉಳಿದುಕೊಂಡಿರುವ ನಾಗರಿಕರ ರಕ್ಷಣೆಗೋಸ್ಕರ ರಷ್ಯಾ ಮಾನವೀಯ ಕಾರಿಡಾರ್ ನಿರ್ಮಾಣ ಮಾಡಿದ್ದು, ಪ್ರಮುಖ ನಾಲ್ಕು ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ.

Ukrain Crisis
Ukrain Crisis

By

Published : Mar 7, 2022, 2:56 PM IST

ಕೀವ್​(ಉಕ್ರೇನ್​):ರಷ್ಯಾ-ಉಕ್ರೇನ್​ ನಡುವಿನ ಸಂಘರ್ಷ 12ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ ಇತರೆ ದೇಶಗಳ ನಾಗರಿಕರ ರಕ್ಷಣೆಗೋಸ್ಕರ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​ ಕದನ ವಿರಾಮ ಘೋಷಿಸಿದ್ದಾರೆ.

ಉಕ್ರೇನ್ ರಾಜಧಾನಿ ಕೀವ್​, ಮಾರಿಪೋಲ್​, ಖಾರ್ಕಿವ್​​​ ಮತ್ತು ಸುಮಿ ನಗರಗಳಲ್ಲಿ ಬೆಳಗ್ಗೆ 10ರಿಂದಲೇ ಕದನ ವಿರಾಮ ಘೋಷಣೆ ಮಾಡಲಾಗಿದೆ. ರಷ್ಯಾ ಮಿಲಿಟರಿ ಅನೇಕ ರೀತಿಯ ಮಾನವೀಯ ಕಾರಿಡಾರ್ ನಿರ್ಮಾಣ ಮಾಡಿದ್ದು ಜನರ ಸ್ಥಳಾಂತರಕ್ಕೆ ಅನುವು ಮಾಡುತ್ತಿದೆ.

ಇದನ್ನೂ ಓದಿ:ಉಕ್ರೇನ್​ನ ವಸತಿ ಪ್ರದೇಶಗಳ ಮೇಲೆ ರಷ್ಯಾ ಶೆಲ್​ ದಾಳಿ; ನಾಗರಿಕರ ಪರದಾಟ, ಜೀವಹಾನಿ

ಫೆ. 24ರಂದು ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡ್ತಿದ್ದಂತೆ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಜನರು ತೊಂದರೆಗೊಳಗಾಗಿದ್ದರು. ಉಕ್ರೇನ್‌ಗೆ ವೈದ್ಯಕೀಯ ವ್ಯಾಸಂಗ ಮಾಡಲು ತೆರಳಿದ್ದ ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದೆ.

ಉಕ್ರೇನ್​ನ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿರುವ ನಾಗರಿಕ ರಕ್ಷಣೆಗೋಸ್ಕರ ಕಳೆದ ಎರಡು ದಿನಗಳ ಹಿಂದೆ ರಷ್ಯಾ ಕದನ ವಿರಾಮ ಘೋಷಣೆ ಮಾಡಿತ್ತು. ಇದರ ಹೊರತಾಗಿಯೂ ಕೂಡ ಕೆಲವೊಂದು ನಗರಗಳ ಮೇಲೆ ಬಾಂಬ್​, ಶೆಲ್​ ದಾಳಿ ನಡೆಸಿದೆ ಎಂದು ಉಕ್ರೇನ್​ ಗಂಭೀರ ಆರೋಪ ಮಾಡಿದೆ. ಉಕ್ರೇನ್​​ನ ಕೀವ್​, ಖಾರ್ಕಿವ್ ಸೇರಿದಂತೆ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೋಸ್ಕರ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್​ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದರು.

ABOUT THE AUTHOR

...view details