ಕರ್ನಾಟಕ

karnataka

ETV Bharat / international

ಲೇಸರ್​ ಲೈಟ್​ ಪ್ರದರ್ಶನದ ಮೂಲಕ ಬ್ರೆಜಿಲ್​​​​​ನಲ್ಲಿ ಸಾಕೇಂತಿಕ 'ಪ್ರೈಡ್​ ಪರೇಡ್'​​ - ವಿಶ್ವ ಪ್ರಸಿದ್ದ ಪ್ರೈಡ್​ ಪರೇಡ್​​

ಲೈಂಗಿಕ ಅಲ್ಪ ಸಂಖ್ಯಾತರ ಅಸ್ಥಿತ್ವ ಸೂಚಿಸುವ ಬ್ರೆಜಿಲ್​ನ ಪ್ರೈಡ್​ ಪರೇಡ್​ ಅನ್ನು ಕೊರೊನಾ ಹಿನ್ನೆಲೆ ಈ ಬಾರಿ ಸಾಂಕೇತಿಕವಾಗಿ ನಡೆಸಲಾಯಿತು.

Laser rainbow projected over Sao Paulo to mark Pride
ಬ್ರೆಝಿಲ್​​ನ ಸಾವೊ ಪಾಲೊದಲ್ಲಿ ಸಾಕೇಂತಿಕ 'ಪ್ರೈಡ್​ ಪರೇಡ್'​​

By

Published : Jun 15, 2020, 1:33 PM IST

ಸಾವೋ ಪಾಲೋ: ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಉಪಸ್ಥಿತಿ ಪ್ರತಿನಿಧಿಸುವ ಬ್ರೆಜಿಲ್​ನ ಪ್ರಸಿದ್ಧ 'ಪ್ರೈಡ್​ ಪರೇಡ್'​​ ಈ ವರ್ಷ ಕೊರೊನಾ ಹಿನ್ನೆಲೆ ನಡೆಸಲು ಅಸಾಧ್ಯವಾಗಿದ್ದು, ಹೀಗಾಗಿ ನಗರದಲ್ಲಿ ಲೇಸರ್​ ಲೈಟ್​ಗಳನ್ನು ಪ್ರದರ್ಶಿಸುವ ಮೂಲಕ ಸಾಂಕೇಂತಿಕ ಆಚರಣೆ ಮಾಡಲಾಯಿತು.

ಪೋರ್ಟೊ ರಿಕನ್ ಕಲಾವಿದ ಯೆವೆಟ್ ಮ್ಯಾಟರ್ನ್ ದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಉಪಸ್ಥಿತಿ ಎತ್ತಿ ಹಿಡಿಯುವ ಸಲುವಾಗಿ ಕಾಮನ ಬಿಲ್ಲು ಹಾಗೂ ರಾಷ್ಟ್ರ ಧ್ವಜದ ಬಣ್ಣದ ಲೇಸರ್​ ಲೈಟ್​ ಪ್ರದರ್ಶನ ಮಾಡಿದರು.

ವಿಶ್ವ ಪ್ರಸಿದ್ದವಾಗಿರುವ 'ಪ್ರೈಡ್​ ಪರೇಡ್'​​ಗೆ ಪ್ರತಿ ವರ್ಷ ಲಕ್ಷಾಂತರ ಜನರು ನಗರದ ಬೀದಿಗಳಲ್ಲಿ ಜಮಾಯಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.

ಗ್ರೂಪೋ ಗೇ ಡಿ ಬಹಿಯಾ ಅಸೋಸಿಯೇಷನ್ ಪ್ರಕಾರ ವಿಶ್ವದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಅತಿ ಹೆಚ್ಚು ಕಿರುಕುಳಕ್ಕೊಳಗಾದ ದೇಶ ಬ್ರೆಜಿಲ್. 2019 ರಲ್ಲಿ ದೇಶದಲ್ಲಿ 297 ಜನರನ್ನು ಹತ್ಯೆ ಮಾಡಲಾಗಿತ್ತು ಮತ್ತು 32 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು.

For All Latest Updates

ABOUT THE AUTHOR

...view details